ಸಖತ್ ಚಿತ್ರದ ಡಬ್ಬಿಂಗ್ ಕಂಪ್ಲೀಟ್

ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗ ವಿಹಾನ್ ನಟಿಸುತ್ತಿರುವ ಸಖತ್ ಚಿತ್ರದ ಡಬ್ಬಿಂಗ್ ಕೆಲಸ ಪೂರ್ಣ ಆಗಿದೆ.

ಈ ಬಗ್ಗೆ ಗಣೇಶ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. “ಬಾಲು & ಜ್ಯೂನಿಯರ್ ಬಾಲು (ವಿಹಾನ್) ನಿಂದ #Dubbing ಮುಕ್ತಾಯ…ನಮ್ಮಿಬ್ಬರ ಮಾತಿನ ಪುಳಕ ಹಾಗೂ ಕಣ್ ಚಳಕ ನಿಮಗೆ ಮಕ್ಕಳ ದಿನಾಚರಣೆ ದಿನಾಂಕದ ಹತ್ತಿರ ಚಿತ್ರಮಂದಿರದಲ್ಲಿ ಕಾಣಸಿಗಲಿದೆ.. ನಿಮ್ಮ ಹಾರೈಕೆಯಿರಲಿ #sakath ” ಎಂದು ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗ ವಿಹಾನ್ ಕನ್ನಡ ಚಿತ್ರರಂಗಕ್ಕೆ ಸಖತ್ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದು, ಚಿತ್ರದ ಪೋಸ್ಟರ್ ಈಗಾಗಲೇ ವೈರಲ್ ಆಗಿದೆ.

ಗಣೇಶ್ ಅಭಿನಯಿಸುತ್ತಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಅವರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ವಿಹಾನ್ ಅಭಿನಯಿಸುತ್ತಿದ್ದಾರೆ. ಇದಲ್ಲದೇ ಗಾಳಿಪಟ-2 ಸಿನಿಮಾದಲ್ಲಿಯೂ ವಿಹಾನ್ ಅಭಿನಯಿಸಲಿದ್ದಾರೆ ಎನ್ನುವ ಮಾಹಿತಿ ಇದೆ.

ನಟ ದುನಿಯಾ ವಿಜಯ್, ಬುಲೆಟ್ ಪ್ರಕಾಶ್ ಸೇರಿದಂತೆ ಹಲವು ನಟರ ಪುತ್ರರು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದು ಈ ಸಾಲಿಗೆ ಗಣೇಶ್ ಪುತ್ರ ಸೇರಿದ್ದಾರೆ.

ವಿಹಾನ್ ಗಣೇಶ್ ಸಖತ್ ಸಿನಿಮಾದಲ್ಲಿ ಜೂನಿಯರ್ ಬಾಲು ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಜೂನಿಯರ್ ಬಾಲು ಚೆಂಡು ಹಿಡಿದಿರುವ, ಪುಟ್ಬಾಲ್ ಆಡುವ, ಓಡುವ ಫೋಟೋಗಳಿವೆ. ಬಾಲ್ಯದ ಆಟದ ಬದುಕು ಈ ಪಾತ್ರದಲ್ಲಿ ಇರುವಂತೆ ಕಾಣುತ್ತಿದೆ.
ಸುನಿ ನಿರ್ದೇಶನದ ಈ ಚಿತ್ರದ ವಿಡಿಯೋ ಸಾಂಗ್ ಗಳು ಈಗಾಗಲೇ ರಿಲೀಸ್ ಆಗಿದ್ದು ಮೆಚ್ಚುಗೆ ಪಡೆದಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!