Bigg Boss Kannada 8: ಬಾಸ್​ ಲೇಡಿ Divya Suresh ಹವಾ ಹೇಗಿದೆ ನೋಡಿ…!

ಬಿಗ್ ಬಾಸ್​ ಕನ್ನಡ ಸೀಸನ್ 8ರಲ್ಲಿ (Bigg Boss Kannada Season 8) ಸ್ಪರ್ಧಿಯಾಗಿದ್ದ ನಟಿ ದಿವ್ಯಾ ಸುರೇಶ್ (Divya Suresh)​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಹೊಸ ಫೋಟೋಶೂಟ್​ಗಳಲ್ಲಿ ಮಿಂಚುತ್ತಿರುವ ದಿವ್ಯಾ ಸುರೇಶ್ ಈಗ ಬಾಸ್​ ಲೇಡಿ ಆಗಿದ್ದಾರೆ.

ಬಿಗ್ ಬಾಸ್​ ಮನೆಗೆ ಹೋಗಿ ಬಂದವರಲ್ಲಿ ಸಾಕಷ್ಟು ಮಂದಿಯ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಅದು ನಟಿ ದಿವ್ಯಾ ಸುರೇಶ್​ ವಿಷಯದಲ್ಲಿ ನಿಜವಾಗಿದೆ. ಬಿಗ್ ಬಾಸ್​ ಕನ್ನಡ ಸೀಸನ್​ 8ರ ಲ್ಲಿ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್​ ಕನ್ನಡ ಸೀಸನ್​ 8ರಲ್ಲಿ 6ನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರ ಬಂದ ದಿವ್ಯಾ ಸುರೇಶ್​ ಅವರು ಟಾಸ್ಕ್​ಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕವೇ ಹೆಚ್ಚು ಜನಪ್ರಿಯವಾಗಿದ್ದರು.

ಬಿಗ್ ಬಾಸ್​ ಮನೆಯಿಂದ ಹೊರ ಬಂದ ನಂತರ ಬಿಡುವಿಲ್ಲದಂತೆ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಅವರ ಲೆಟೆಸ್ಟ್ ಫೋಟೋಶೂಟ್​ನಲ್ಲಿ ಸಖತ್​ ಕ್ಲಾಸಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಕಾರಿನಲ್ಲಿ ತುಂಡುಡುಗೆ ತೊಟ್ಟ ದಿವ್ಯಾ ಸುರೇಶ್ ಬಾಸ್​ ಲೇಡಿಯಾಗಿದ್ದಾರೆ.

ಹೌದು, ಬಾಬ್​ ಬೇಬಿಯಾಗುವುದನ್ನು ಆಯ್ಕೆ ಮಾಡಿಕೊಳ್ಳುವ ಬದಲು ತಾನು ಬಾಸ್​ ಲೇಡಿಯಾಗಲು ಇಷ್ಟ ಪಡುತ್ತೇನೆ ಎಂದು ದಿವ್ಯಾ ಸುರೇಶ್​ ಅವರು ಬರೆದುಕೊಂಡಿದ್ದಾರೆ. ಫೋಟೋಶೂಟ್​ಗಳ ಜತೆ ಹೊಸ ಧಾರಾವಾಹಿಯಲ್ಲೂ ಈ ನಟಿ ಕಾಣಿಸಿಕೊಳ್ಳಲಿದ್ದಾರಂತೆ.

ಕಿರುತೆರೆಯಲ್ಲಿ ಧಾರಾವಾಹಿ ಒಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆಯಂತೆ.ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ದಿವ್ಯಾ ಸುರೇಶ್​ ನಟಿಸಲಿದ್ದಾರಂತೆ. ಆದರೆ ಈ ಬಗ್ಗೆ ದಿವ್ಯಾ ಸುರೇಶ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ಹೌದು, ಬಿಗ್ ಬಾಸ್​ ಮನೆಯಿಂದ ಹೊರ ಬಂದ ನಂತರ ದಿವ್ಯಾ ಸುರೇಶ್ ಅವರಿಗೆ ಬೇಡಿಕೆ ಹೆಚ್ಚಿದೆಯಂತೆ. ಅವರನ್ನು ಅರಸುತ್ತಾ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ಅದರಲ್ಲೂ ಈಗ ಅವರಿಗೆ ಭರ್ಜರಿ ಆಫರ್ ಒಂದು ಸಿಕ್ಕಿದೆಯಂತೆ. ಕಿರುತೆರೆಯಲ್ಲಿ ಧಾರಾವಾಹಿ ಒಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆಯಂತೆ.ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ದಿವ್ಯಾ ಸುರೇಶ್​ ನಟಿಸಲಿದ್ದಾರಂತೆ. ಆದರೆ ಈ ಬಗ್ಗೆ ದಿವ್ಯಾ ಸುರೇಶ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Be the first to comment

Leave a Reply

Your email address will not be published. Required fields are marked *

Translate »
error: Content is protected !!