ಲವ್ಲೀ ಸ್ಟಾರ್ ಪ್ರೇಮ್ ಅವರ “ಪ್ರೇಮಂ ಪೂಜ್ಯಂ” ಚಿತ್ರದಲ್ಲಿ ಹಾಡು ಕಥೆಯನ್ನು ಹೇಳುವಂತೆ ಮೇಕಿಂಗ್ ಮಾಡಲಾಗಿದೆ ಎಂದು ಚಿತ್ರದ ನಿರ್ದೇಶಕ ಡಾ. ಬಿ. ಎಸ್. ರಾಘವೇಂದ್ರ ಹೇಳಿದ್ದಾರೆ. “ಹಾಡು ಕಥೆಯನ್ನು ಹೇಳಬೇಕು ಎನ್ನುವುದು ನನ್ನ ಆಶಯವಾಗಿತ್ತು. ಈ ಕಾರಣದಿಂದ ಸಿನೆಮಾದಲ್ಲಿ ಹೆಚ್ಚು ಹಾಡುಗಳನ್ನು ಬಳಸಿಕೊಳ್ಳಲಾಗಿದೆ” ಎಂದು ಚಿತ್ರದ ನಿರ್ದೇಶಕ ಡಾ. ರಾಘವೇಂದ್ರ ಯೂ ಟ್ಯೂಬ್ ನಲ್ಲಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಒಟ್ಟು 12 ಹಾಡುಗಳು ಇರುವ ಈ ಚಿತ್ರದ ಹಾಡುಗಳು ಒಂದರ ನಂತರ ಒಂದು ಯೂ ಟ್ಯೂಬ್ ನಲ್ಲಿ ಬಿಡುಗಡೆ ಆಗಿ ಸಿನಿಮಾಸಕ್ತರ ಗಮನ ಸೆಳೆದಿವೆ. ಸೋನು ನಿಗಮ್, ಡಾ. ಸಂದೀಪ್, ಸಾಧುಕೋಕಿಲ, ಅರ್ಮಾನ್ ಮಲಿಕ್ ಸೇರಿದಂತೆ ಪ್ರಖ್ಯಾತ ಗಾಯಕರು ಧ್ವನಿ ನೀಡಿದ್ದಾರೆ. ಚಿತ್ರದ ಸಂಗೀತ ಪಯಣದ ಬಗ್ಗೆ ನಿರ್ದೇಶಕರು ಇಲ್ಲಿ ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ. 56 ಸಾವಿರಕ್ಕೂ ಹೆಚ್ಚು ಜನರು ಇದನ್ನು ವೀಕ್ಷಣೆ ಮಾಡಿರುವುದು ವಿಶೇಷ ಆಗಿದೆ.
ಸೋನು ನಿಗಮ್ ಅವರ ಧ್ವನಿಯಲ್ಲಿ “ಓ ಭಾನ ಮೋಡಗಳೇ, ನನ್ನ ಕತೆಯನು ಕೇಳುವಿರಿ ” ಸಾಂಗ್ ಮೂಡಿ ಬಂದಿದ್ದು, ಚಿತ್ರಪ್ರೇಮಿಗಳ ಹೃದಯಕ್ಕೆ ಕಚಗುಳಿ ಇಡುತ್ತಿದೆ. ಅರ್ಮಾನ್ ಮಲಿಕ್, ಮೃದುಲಾ ವಾರಿಯರ್ ಧ್ವನಿಯಲ್ಲಿ ಮೂಡಿ ಬಂದಿರುವ, “ಅಂಬಾರಿ ನನ್ನ ಪ್ರೇಮವಿದು, ಅಂಬಾರಿ ನನ್ನ ಹೃದಯವಿದು…” ಸಾಂಗ್ ಗೆ ಚಿತ್ರಪ್ರೇಮಿಗಳು ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ.
ಖ್ಯಾತ ಗಾಯಕ ಹರಿಹರನ್ ಹಾಡಿರುವ ಟೈಟಲ್ ಹಾಡು ಸಾಕಷ್ಟು ಜನಪ್ರಿಯ ಆಗಿದೆ. ನಿರ್ದೇಶಕ ಡಾ. ಬಿ. ಎಸ್. ರಾಘವೇಂದ್ರ ಅವರೇ ಸಂಗೀತ ಸಂಯೋಜನೆ ಮಾಡಿರುವುದು ವಿಶೇಷ ಆಗಿದೆ. “ಪ್ರೇಮಂ ಪೂಜ್ಯಂ” ಚಿತ್ರದ ಫಸ್ಟ್ ಲುಕ್ ಒಳಗೊಂಡ ಟ್ರೈಲರ್ ಅಕ್ಟೋಬರ್ 14ರಂದು ಬಿಡುಗಡೆ ಆಗಲಿದೆ. ಚಿತ್ರ ಇದೇ ತಿಂಗಳ 29ರಂದು ತೆರೆಗೆ ಬರಲಿದೆ.
Be the first to comment