ಶಿವರಾಜ್ ಕುಮಾರ್ ಅವರ ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಇದೆ ಎಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ. ಬೆಂಗಳೂರಿನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುನಿಯಾ ವಿಜಯ್ ಅವರು ನಿರ್ದೇಶಕ ಆದಾಗ ಆಶ್ಚರ್ಯವಾಯಿತು. ನಾನು ಬಹಳ ವರ್ಷ ಹಿಂದೆ ಸಿನಿಮಾ ನಿರ್ದೇಶನ ಮಾಡಬೇಕೆಂದು ಯೋಚನೆ ಮಾಡಿದ್ದೆ. ಈಗ ಮತ್ತೆ ಕನಸಿಗೆ ನೀರೆರೆಯುವ ಆಲೋಚನೆ ಇದೆ ಎಂದು ಹೇಳಿದರು.
ನಿರ್ದೇಶಕ ಸಂತೋಷ್, ಚೇತನ್ ಎಲ್ಲರೂ ನಾನು ನಿರ್ದೇಶನ ಮಾಡುತ್ತೇನೆ ಎಂದು ಹೇಳಿದರೆ ಸಹಾಯ ಮಾಡುತ್ತಾರೆ. ನಾನು ಚೇರ್ ಮೇಲೆ ಕುಳಿತು ಆಕ್ಷನ್ ಕಟ್ ಹೇಳಿದರೆ ಸಾಕು ಎಂದರು. ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶಿಸಿರುವ ಎಲ್ಲ ಸಿನಿಮಾಗಳು ನನಗೆ ಇಷ್ಟ. ಅವರ ಮೊದಲನೇ ಸಿನಿಮಾ ‘ತರ್ಲೆ ನನ್ ಮಗ’ ವನ್ನು ನೂರಾರು ಬಾರಿ ನೋಡಿದ್ದೇನೆ. ನಮ್ಮ ಬ್ಯಾನರ್‌ಗೆ ಉಪೇಂದ್ರ ‘ಓಂ’, ‘ಸ್ವಸ್ತಿಕ್’ ನಂಥ ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಅವರು ನನಗೆ ಸ್ಪೂರ್ತಿ ಆಗಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಥ್ರಿಲ್ಲಿಂಗ್ ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ ಎಂದರು.
5 ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ರಾಜ್ ಕುಟುಂಬ ತೊಡಗಿಸಿಕೊಂಡಿದ್ದರೂ, ಇದುವರೆಗೆ ಯಾವೊಬ್ಬರೂ ನಿರ್ದೇಶನಕ್ಕೆ ಕೈ ಹಾಕಿಲ್ಲ. ಪುನೀತ್ ರಾಜ್‌ಕುಮಾರ್ ಸಿನಿಮಾ ನಿರ್ದೇಶನ ಮಾಡಿದರೆ ನಿರ್ದೇಶನ ಮಾಡಿದ ಮೊದಲಿಗ ಎನ್ನುವ ದಾಖಲೆ ಮಾಡಲಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆ ಹೊಂದಿದ್ದು, ಕೆಲವು ಸಿನಿಮಾಗಳನ್ನು ನಿರ್ಮಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ.
__
Be the first to comment