12 ಹಾಡುಗಳ ಸಂಗೀತಮಯ ಚಿತ್ರ “ಪ್ರೇಮಂ ಪೂಜ್ಯಂ”

‘ಲವ್ಲೀ ಸ್ಟಾರ್‌’ ಪ್ರೇಮ್ ಅವರ 25ನೇ ಸಿನಿಮಾ ‘ ಪ್ರೇಮಂ ಪೂಜ್ಯಂ” ನಲ್ಲಿ ಒಟ್ಟು 12 ಹಾಡುಗಳು ಇದ್ದು, ಒಂದರ ನಂತರ ಒಂದು ಬಿಡುಗಡೆ ಆಗುತ್ತಿರುವ ಚಿತ್ರದ ಹಾಡುಗಳು ಸಿನಿಮಾಸಕ್ತರ ಗಮನ ಸೆಳೆಯುತ್ತಿವೆ.

ಪ್ರೇಮ್‌ ಅಭಿನಯದ 25ನೇ ಸಿನಿಮಾ ಎನ್ನುವ ಕಾರಣಕ್ಕೆ ‘ಪ್ರೇಮಂ ಪೂಜ್ಯಂ’ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರೀಕ್ಷೆ ಹುಸಿ ಮಾಡದಂತೆ ಚಿತ್ರತಂಡ ಯೂ ಟ್ಯೂಬ್ ನಲ್ಲಿ ಹಾಡು ಬಿಡುಗಡೆ ಮಾಡುತ್ತಿದ್ದು ಅಚ್ಚ ಕನ್ನಡದಲ್ಲಿ ಮೂಡಿ ಬಂದಿರುವ ಹಾಡುಗಳು ಮನಸಿಗೆ ಮುದ ನೀಡುತ್ತಿವೆ.

12 ಹಾಡುಗಳನ್ನು ಒಳಗೊಂಡು ಈ ಸಿನಿಮಾದಲ್ಲಿ ಪ್ರೇಮ್‌ ಅವರು 9 ಡಿಫರೆಂಟ್‌ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಆಗಿದೆ. ಸಂಗೀತಮಯ ಚಲನಚಿತ್ರಕ್ಕೆ ಸೋನು ನಿಗಮ್, ಡಾ. ಸಂದೀಪ್, ಸಾಧುಕೋಕಿಲ, ಅರ್ಮಾನ್ ಮಲಿಕ್ ಸೇರಿದಂತೆ ಪ್ರಖ್ಯಾತ ಗಾಯಕರು ಧ್ವನಿ ನೀಡಿದ್ದಾರೆ.
ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ಸಂಗೀತವನ್ನೂ ಡಾ. ಬಿ. ಎಸ್. ರಾಘವೇಂದ್ರ ನೀಡಿದ್ದಾರೆ. ಅವರು ಮೂಲತಃ ವೈದ್ಯರು ಎನ್ನುವುದು ವಿಶೇಷ.

ಬೃಂದಾ ಆಚಾರ್ಯ, ಐಂದ್ರಿತಾ ರೇ, ಸಾಧು ಕೋಕಿಲ, ಮಾಸ್ಟರ್‌ ಆನಂದ್‌, ಅನು ಪ್ರಭಾಕರ್‌, ಮಾಳವಿಕಾ ಅವಿನಾಶ್‌, ನಾಗಾಭರಣ ಮುಂತಾದವರು ನಟಿಸಿರುವ ಈ ಸಿನಿಮಾ ಅಕ್ಟೋಬರ್ 29ರಂದು ಬೆಳ್ಳಿತೆರೆಗೆ ಬರಲಿದೆ.

ಚಿತ್ರಕ್ಕೆ ರಕ್ಷಿತ್ ಕೆಡಂಬಾಡಿ, ಡಾ.ರಾಜ್ ಕುಮಾರ್ ಜಾನಕಿ ರಾಮನ್, ಡಾ. ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ಅವರು ಬಂಡವಾಳ ಹಾಕಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!