ಪರಿಮಳ ಲಾಡ್ಜ್ ನಾಯಕನಾಗಿ ಯೋಗೇಶ್

ಪರಿಮಳ ಲಾಡ್ಜ್ ಚಿತ್ರಕ್ಕೆ ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ವರ್ಷದ ಹಿಂದೆ ನಿರ್ದೇಶಕ ವಿಜಯಪ್ರಸಾದ್ ಅವರು ಪರಿಮಳ ಲಾಡ್ಜ್ ಸಿನಿಮಾ ಘೋಷಣೆ ಮಾಡಿದ್ದರು. ಬಳಿಕ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿತ್ತು. ಈಗ ಪರಿಮಳ ಲಾಡ್ಜ್ ಚಿತ್ರದಿಂದ ಸತೀಶ್ ನೀನಾಸಂ ಹಿಂದಕ್ಕೆ ಸರಿದ್ದಾರೆ ಎನ್ನುವ ಮಾಹಿತಿ ಇದ್ದು, ಯೋಗೇಶ್ ನಾಯಕನಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

ನವರಸ ನಾಯಕ ಜಗ್ಗೇಶ್ ನಟನೆಯ ತೋತಾಪುರಿ ಭಾಗ 1, ನೀನಾಸಂ ಸತೀಶ್ ನಟನೆಯ ಪೆಟ್ರೋಮ್ಯಾಕ್ಸ್ ಚಿತ್ರಗಳ ರಿಲೀಸ್‌ ಬಳಿಕ ವಿಜಯಪ್ರಸಾದ್ ಅವರು ಪರಿಮಳ ಲಾಡ್ಜ್ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಚಿತ್ರದಲ್ಲಿ ಹಿರಿಯ ನಟಿ ಸುಮನ್ ರಂಗನಾಥ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಆದರೆ ಚಿತ್ರದ ನಾಯಕಿಯ ಆಯ್ಕೆ ಅಂತಿಮವಾಗಿಲ್ಲ. ದಿವಂಗತ ನಟ ಬುಲೆಟ್ ಪ್ರಕಾಶ್ ಅವರ ಪಾತ್ರದಲ್ಲಿ ನಟಿಸಲು ಮತ್ತೊಬ್ಬ ಕಲಾವಿದನನ್ನು ಚಿತ್ರತಂಡ ಹುಡುಕುತ್ತಿದೆ.

ಎರಡು ವರ್ಷದ ಹಿಂದೆ ಪರಿಮಳ ಲಾಡ್ಜ್ ಟೀಸರ್ ಬಿಡುಗಡೆ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. “ಚಿತ್ರದಲ್ಲಿ ಅಶ್ಲೀಲ ಪದಗಳ ಸಂಭಾಷಣೆ ಇದೆ. ಪರಿಮಳ ಲಾಡ್ಜ್ ಸಿನಿಮಾ ಬಿಡುಗಡೆ ಆದರೆ ನಾನೇ ಕೇಸ್ ಹಾಕುತ್ತೇನೆ. ಇದು ಸಮಾಜಕ್ಕೆ ಮಾರಕ” ಎಂದು ಹಿರಿಯ ಪತ್ರಕರ್ತ ದಿವಂಗತ ರವಿ ಬೆಳಗೆರೆ ಆಕ್ರೋಶ ವ್ಯಕ್ತಪಡಿಸಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!