ಖ್ಯಾತ ಹಾಡುಗಾರ ವಿಜಯ್ ಪ್ರಕಾಶ್ ಹಾಡಿರುವ ಕಲಾವಿದರ ಬದುಕಿನ ಹೋರಾಟವನ್ನು ಬಿಂಬಿಸುವ ವಿಡಿಯೋ ಆಲ್ಬಮ್ ಆರಾಮ್ಸೆ ಯೂಟ್ಯೂಬ್ನಲ್ಲಿ ವೈರಲ್ ಆಗಿದೆ.
ಕಲಾವಿದ ಆಗಬೇಕು ಎಂದು ಕಷ್ಟ ಪಡುವ ಉದಯೋನ್ಮುಖ ಕಲಾವಿದರ ಹೋರಾಟವನ್ನು ಬಿಂಬಿಸುವ ಈ ಹಾಡು ಜೀವನದಲ್ಲಿ ತಿರಸ್ಕಾರಗಳು ಬಂದ ಮಾತ್ರಕ್ಕೆ ಬದುಕನ್ನು ಕೈಬಿಡಬಾರದು. ಜೀವನದಲ್ಲಿ ಬೆಳೆಯಬೇಕು ಅಂದರೆ ಬದುಕಬೇಕು ಎನ್ನುವ ಅಂಶವನ್ನು ನಿರೂಪಣೆ ಮಾಡುತ್ತಿದೆ. 45 ಸಾವಿರಕ್ಕೂ ಹೆಚ್ಚು ಜನರು ಈ ಹಾಡನ್ನು ವೀಕ್ಷಣೆ ಮಾಡಿ ಮೆಚ್ಚಿದ್ದಾರೆ.
ಅಭಿಷೇಕ್ ಮಠದ್ ಅವರು ಈ ಹಾಡನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. “ಹಾಡಿನ ಸಾಹಿತ್ಯ ವಿಜಯ್ ಪ್ರಕಾಶ್ ಅವರಿಗೆ ಇಷ್ಟವಾಗಿ ಅವರು ಸಂತಸದಿಂದ ಹಾಡಿದ್ದಾರೆ. ಈ ಹಾಡನ್ನು ಚಿತ್ರೀಕರಣ ಮಾಡಿದ ರೀತಿಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ” ಎಂದು ಅಭಿಷೇಕ ಮಠದ್ ಹೇಳಿದ್ದಾರೆ.
ಅಭಿಷೇಕ್ ಅವರು ಈ ಹಿಂದೆ ದಿಗಂತ್ ಜೊತೆ ಮ್ಯೂಸಿಕ್ ವಿಡಿಯೋ ಮಾಡಿದ್ದರು. ಅವರೇ ನೃತ್ಯ ನಿರ್ದೇಶನವನ್ನೂ ಮಾಡಿದ್ದರು. ಬಳಿಕ ಚಂದನ್ ಶೆಟ್ಟಿ ಜೊತೆಗೆ ಟಕಿಲಾ, ಬಡಪಾಯಿ ಕುಡುಕ ಸಾಂಗ್ಗಳನ್ನು ಮಾಡಿದ್ದರು. ಇತ್ತೀಚೆಗೆ ಅದಿತಿ ಪ್ರಭುದೇವ ಅವರೊಂದಿಗೆ ಪರ್ಫೆಕ್ಟ್ ಗರ್ಲ್ ಎನ್ನುವ ಸಾಂಗ್ ಮಾಡಿದ್ದರು. ಸದ್ಯ ಅವರು ಬಳೆಪೇಟೆ, ಸಮುದ್ರಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Be the first to comment