17ರಂದು ದಿ.ಮಂಜುನಾಥನ ಗೆಳೆಯರ ಆಗಮನ
ಕನ್ನಡದಲ್ಲಿ ಕಿರುಚಿತ್ರವೊಂದನ್ನು ನಿರ್ದೇಶಿಸುವ ಮೂಲಕ ಕಲಾರಂಗಕ್ಕೆ ಕಾಲಿಟ್ಟಿದ್ದ ಯುವ ನಿರ್ದೇಶಕ ಅರುಣ್ ಎನ್.ಡಿ. ಈಗ ಚಲನಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಆ ಚಿತ್ರದ ಹೆಸರು ದಿ.ಮಂಜುನಾಥನ ಗೆಳೆಯರು.
ಇದೇ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಿದ್ದವಾಗಿರುವ ಈ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಗಿತ್ತು. ವಿಶೇಷವಾದ ಶೀರ್ಷಿಕೆಯನ್ನು ಹೊಂದಿರುವ ಈ ಚಲನಚಿತ್ರಕ್ಕೆ ಅರುಣ್ ಎನ್.ಡಿ. ಆ್ಯಕ್ಷನ್-ಕಟ್ ಹೇಳುವುದರ ಜೊತೆ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣವನ್ನು ಸಹ ಮಾಡಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದ ಕಥೆಯ ಬಗ್ಗೆ ಹೇಳಬೇಕೆಂದರೆ ಒಂದೇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ 5 ಜನ ಆತ್ಮೀಯ ಸ್ನೇಹಿತರು ಬಹಳ ವರ್ಷಗಳ ನಂತರ ಒಂದು ಸ್ಥಳದಲ್ಲಿ ಭೇಟಿಯಾಗುತ್ತಾರೆ. ಆದರೆ ಅವರೆಲ್ಲ ಸಂಧಿಸುವುದು ಒಂದು ಪೆÇಲೀಸ್ ಠಾಣೆಯಲ್ಲಿ, ಎನ್ನುವುದೇ ಈ ಚಿತ್ರದ ವಿಶೇಷ. ಅವರು ಪೆÇೀಲೀಸ್ ಠಾಣೆಯಲ್ಲಿ ಸಂಧಿಸುವ ಸಂದಭರ್À ಹೇಗೆ, ಏಕೆ ನಿರ್ಮಾಣವಾಯಿತು ಎಂಬುದನ್ನು ಹೇಳು
ಸಮಯದಲ್ಲಿ ಮತ್ತೊಂದು ಕಥೆ ಅನಾವರಣಗೊಳ್ಳುತ್ತದೆ. ಆ ಕಥೆ ಏನೆಂಬುದನ್ನು ಹೇಳುವುದೇ ದಿವಂಗತ ಮಂಜುನಾಥನ ಗೆಳೆಯರು ಚಿತ್ರದ ಸಸ್ಪೆನ್ಸ್ ಅಂಶ ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ಕೂಡ ಆಗಿರುವ ಅರುಣ್ಚಿತ್ರದ ಬಗ್ಗೆ ಮಾತನಾಡುತ್ತ ಕಾಮಿಡಿ ಥ್ರಿಲ್ಲರ್ ಕಥೆ ಹೊಂದಿರುವ ಮಲ್ಟಿ ಲೇಯರ್ ಸಿನಿಮಾ ಇದು. ಚಿತ್ರದಲ್ಲಿ ಸ್ಕ್ರಿಪ್ಟೇ ಹೀರೋ. ಸುಮಾರು 6-7 ತಿಂಗಳ ಕಾಲ ಕೂತು ಚಿತ್ರಕ್ಕೆ ಸ್ಕ್ರಿಪ್ಟ್ ವರ್ಕ್ ಮಾಡಿ ನನೆನ. ಇಡೀ ಚಿತ್ರದಲ್ಲಿ ಈ ಟೈಟಲ್ ಕ್ಯಾರಿಯಾಗುತ್ತದೆ. ನಮ್ಮ ಚಿತ್ರದಲ್ಲಿ 90 ರಷ್ಟು ಹೊಸ ಕಲಾವಿದರೇ ನಟಿಸಿದ್ದಾರೆ. ಎಲ್ಲರನ್ನೂ ಆಡಿಷನ್ ಮೂಲಕವೇ ಸೆಲೆಕ್ಟ್ ಮಾಡಿದ್ದೆವು. ಚಿತ್ರದ ಪ್ರೊಮೋಷನ್‍ಗೆ ಬೆಂಕಿ ಪೊಟ್ಟಣದ ಮೇಲೆ ಚಿತ್ರದ ಪೋಸ್ಟರ್ ಪ್ರಿಂಟ್ ಮಾಡಿಸಿದ್ದೆವು. ಅದಕ್ಕೆ ಒಳ್ಳೇ ರೆಸ್ಪಾನ್ಸ್ ಬಂತು. ಚಿತ್ರದ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪುಟ್ಟಣ್ಣ ಸ್ಟುಡಿಯೋ, ಭೂಮಿಕಾ ಎಸ್ಟೇಟ್ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಿz್ದÉೀವೆ. ಚಿತ್ರಕ್ಕೆ ಯ/ಎ ಸರ್ಟಿಫಿಕೇಟ್ ಸಿಕ್ಕಿದೆ. ಕಾಮಿಡಿ, ಕ್ರೈಂ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರೋ ನಮ್ಮ ಚಿತ್ರವನ್ನು ಇದೇ ತಿಂಗಳ 17ರಂದು ಬಿಡುಗಡೆ ಮಾಡುತ್ತಿz್ದÉೀವೆ ಎಂದು ಹೇಳಿದರು. ಚಿತ್ರದ ಪ್ರಮುಖ ಪಾತ್ರದಲ್ಲಿ ರುದ್ರಪ್ರಯಾಗ್ ಹಾಗೂ ಶೀತಲ್ ಪಾಂಡೆ ನಟಿಸಿದ್ದು, ಶಂಕರ್ ಮೂರ್ತಿ ಅವಿನಾಶ್ ಮುದ್ದಪ್ಪ, ಸತೀಶ್ ಉಳಿದ ತಾರಾಬಳಗದಲ್ಲಿದ್ದಾರೆ. ಇವರೆಲ್ಲ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ಚಿತ್ರದ ಮಂಜುನಾಥನ ಪಾತ್ರದಾರಿ ಸಚ್ಚಿದಾನಂದ ಕೂಡ ಹಾಜರಿದ್ದು ಪಾತ್ರದ ಬಗ್ಗೆ ಹೇಳಿಕೊಂಡರು. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿನಯ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸತೀಶ್ ಆರ್ಯನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಅರುಣ್ ಹಾಗೂ ಗೋಪಿ ಶೀಗೆಹಳ್ಳಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರವಿ ಪೂಜಾರ ಈ ಚಿತ್ರದ ಕಲಾ ನಿರ್ದೇಶನ ಮಾಡುವುದರೊಂದಿಗೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ
Pingback: Tow Collierville TN