ಡಿಎಎಂ36 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಜನಿವಾಸ ಕನ್ನಡ ಚಿತ್ರದ ಶೀರ್ಷಿಕೆ ಪೋಸ್ಟರ್ ದಸರಾ ಹಬ್ಬದಂದು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಈಗಾಗಲೇ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಮಿಥುನ್ ಸುವರ್ಣ ನಿರ್ದೇಶನದ ಈ ಚಿತ್ರವನ್ನು ಸುಮಾರು 56 ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಆಸುಪಾಸಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾದ ಸೆಟ್ ವೊಂದರಲ್ಲಿ ಚಿತ್ರದ ಮೂಲ ಭಾಗವನ್ನು ಚಿತ್ರಿಕರಿಸಲಾಗಿದೆ.
ನಿರ್ಮಾಪಕರಾದ ದಾ.ಪಿ ಆಂಜನಪ್ಪ ಹಾಗೂ ಸಹ ನಿರ್ಮಾಪಕರಾದ ಲೋಕೇಶ್ ಎನ್ ಗೌಡ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀ ನಗರ ಕಿಟ್ಟಿ ಅವರು ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ರಾಘವ್, ಕೃತಿಕಾ, ಬಾಲರಾಜ್ ವಾಡಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.
ಕಿರುತೆರೆಯ ಮೂಲಕ ಗಮನ ಸೆಳೆದು ನಂತರ “ಕೆಂಗುಲಾಬಿ’ ಚಿತ್ರದ ಮೂಲಕ ಹಿರಿತೆರೆಗೆ ಪರಿಚಯವಾದ ಕೃತ್ತಿಕಾ ನಾಯಕಿ ಆಗಿ ನಟಿಸಿದ್ದಾರೆ.
“ಯಾರಿಗೆ ಯಾರುಂಟು’ ಚಿತ್ರದ ಬಳಿಕ ಚಿತ್ರರಂಗದಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ಕೃತ್ತಿಕಾ ಇತ್ತೀಚೆಗೆ ಬಿಡುಗಡೆ ಆದ “ಶಾರ್ದೂಲ’ ಚಿತ್ರದಲ್ಲೂ ನಟಿಸಿದ್ದಾರೆ.
ರಾಜ ನಿವಾಸ ಚಿತ್ರದಲ್ಲಿ ಅವರು ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡುವವರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಸ್ಪೆನ್ಸ್ – ಥ್ರಿಲ್ಲರ್ ಕಥಾ ಹಂದರ ಹೊಂದಿದೆ. ದಂಪತಿಗಳು ಒಂದು ಕೇಸ್ ಹುಡುಕಿಕೊಂಡು ಅಪರಿಚಿತ ಜಾಗಕ್ಕೆ ಹೋದಾಗ ಅಲ್ಲಿ ನಡೆಯುವ ಘಟನೆಗಳನ್ನು “ರಾಜ ನಿವಾಸ’ ಸಿನಿಮಾ ಹೊಂದಿದೆ.
________
Be the first to comment