ಬಂಗಾಳಿ ನಟಿ ನೈನಾ ಗಂಗೂಲಿ ಅವರು ಕನ್ನಡದ ರೊಮ್ಯಾಂಟಿಕ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆ.
ಪಿ2 ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿರುವ ಪ್ರಣಯಂ ಚಿತ್ರದಲ್ಲಿ ರಾಜವರ್ಧನ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
“ಸ್ಕ್ರಿಪ್ಟ್ ಓದುವ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. 15 ದಿನಗಳ ಶೆಡ್ಯೂಲ್ ನೊಂದಿಗೆ ಇನ್ನೊಂದೆರಡು ದಿನಗಳಲ್ಲಿ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದೇನೆ” ಎಂದು ನೈನಾ ಗಂಗೂಲಿ ಹೇಳಿದ್ದಾರೆ.
“ನಾನು ಮೂಲತಃ ಬಂಗಾಳಿಯಾಗಿದ್ದು, ದಕ್ಷಿಣ ಭಾರತದ ಭಾಷೆಗಳುಸವಾಲಾಗಿವೆ. ಕನ್ನಡದಲ್ಲಿ ಹೊಸ ಅನುಭವ ಸಿಗಲಿದೆ. ನಿರ್ಮಾಪಕ, ನಿರ್ದೇಶಕ ಮತ್ತು ನಾಯಕ ರಾಜವರ್ಧನ್ ಸಂಭಾಷಣೆಗಳಿಗೆ ನನಗೆ ಸಹಾಯ ಮಾಡುತ್ತಿದ್ದಾರೆ. ಪ್ರಣಯಂ ಒಂದು ತಾಜಾ ಕಥೆಯಾಗಿದೆ. ಇದು ಕೌಟುಂಬಿಕ ಸಿನೆಮಾವಾಗಿದ್ದು ಪ್ರತಿಭೆ ಹೊರಹಾಕಲು ಉತ್ತಮ ಅವಕಾಶವಿದೆ” ಎಂದು ನೈನಾ ತಿಳಿಸಿದ್ದಾರೆ.
ಚಿತ್ರಕ್ಕೆ ಪರಮೇಶ್ ಅವರು ಬಂಡವಾಳ ಹೂಡಿದ್ದಾರೆ. ಪ್ರಣಯಂ ಮೂಲಕ ಸಂಗೀತ ನಿರ್ದೇಶಕ ಮನೋಮೂರ್ತಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ನಾಗೇಶ್ ಆಚಾರ್ಯ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.
Be the first to comment