ಕೊರೋನದಿಂದ ಬಳಲುತ್ತಿರುವ ನಟಿ ವಿಜಯಲಕ್ಷ್ಮೀ ಅವರಿಗೆ ಕನ್ನಡ ಚಿತ್ರರಂಗದ ಕಲಾವಿದರು ಸಹಾಯ ಮಾಡದೆ ಇರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.
” ಕೊರೋನದಿಂದ ಬಳಲುತ್ತಿರುವ ತನಗೆ ಯಾರಿಂದಲೂ ಸಹಾಯ ಸಿಗುತ್ತಿಲ್ಲ. ನಾನು ಬದುಕುವುದೇ ಕಷ್ಟ ಎಂದು ಅನಿಸುತ್ತಿದೆ. ನಾನು ಸತ್ತರೆ ಕಲಾವಿದರು ಎಲ್ಲರೂ ಸೇರಿ ನನ್ನನ್ನು ಕೊಂದರು ಎಂದು ತಿಳಿದುಕೊಳ್ಳಿ ” ಎಂದು ವಿಜಯಲಕ್ಷ್ಮೀ ಅವರು ಗುರುವಾರ ವಿಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಇದರ ಜೊತೆಗೆ ಅಭಿಮಾನಿಗಳು ಸಹಾಯ ಮಾಡಬೇಕು ಎಂದು ಕೋರಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು, ನಟಿಯ ಈಗಿನ ಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹಲವರು ಕಲಾವಿದರ ಸಂಘ ಸಹಾಯ ಮಾಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
” ಸಿನಿಮಾ ಕ್ಷೇತ್ರದಲ್ಲಿ ನಟರು ಕೋಟಿ ಹಣ ಗಳಿಸಿದ್ದಾರೆ. ಅದೇ ಕ್ಷೇತ್ರದ ಮಹಿಳೆಯೊಬ್ಬಳು ಈ ರೀತಿ ಬೇಡುವಾಗ ನಿಮಗೆ ಕರುಣೆ ಬರುವುದಿಲ್ಲವೇ? ” ಎಂದು ಗುರು ಗಂಗನಹಳ್ಳಿ ಎನ್ನುವವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಿವ ಶಂಕರ್ ಎನ್ನುವವರು, ” ಕಲಾವಿದ ಸಂಘದವರು ಯಾಕೆ ಸಹಾಯ ಮಾಡುತ್ತಿಲ್ಲ? ಕಲಾವಿದ ಸತ್ತ ಬಳಿಕ ಸಂತಾಪ ಸೂಚಿಸುವ ಬದಲು ಕಲಾವಿದರನ್ನು ಸಾಯಲು ಬಿಡದೆ ಬದುಕಿಸಿಕೊಳ್ಳಿ. ಸತ್ತ ಮೇಲೆ ಪ್ರೀತಿ, ಅಭಿಮಾನ ಯಾರಿಗೂ ಬೇಡ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದರೆ ಮರುಜನ್ಮ ನೀಡಿದಂತೆ ಆಗುತ್ತದೆ” ಎಂದಿದ್ದಾರೆ.
ವಿಜಯಲಕ್ಷ್ಮೀ ಅವರು ಈ ಹಿಂದೆ ತಮ್ಮ ಅಕ್ಕನ ಚಿಕಿತ್ಸೆಗೆ ಹಣ ನೀಡಲು ಸಹಾಯ ಮಾಡುವಂತೆ ಕೋರಿ ಸಂಸದೆ ಸುಮಲತಾ ಅವರ ನೆರವು ಕೋರಿ ವಿಡಿಯೋ ಮಾಡಿದ್ದರು.
Be the first to comment