‘ಹೆಡ್ ಬುಷ್‌’ ನಲ್ಲಿ ರವಿಚಂದ್ರನ್ ಪಾತ್ರ

ಅಂಡರ್ ವರ್ಲ್ಡ್ ಡಾನ್ ಆಗಿದ್ದ ಜಯರಾಜ್ ಜೀವನ ಆಧರಿಸಿದ ಸಿನಿಮಾ ‘ಹೆಡ್ ಬುಷ್‌’ನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಲಿದ್ದಾರೆ.

ಸಿನಿಮಾದಲ್ಲಿ ರವಿಚಂದ್ರನ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಾಯಕನ ನಡೆಯನ್ನು ಪ್ರಶ್ನಿಸುವ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ.

ಡಾಲಿ ಧನಂಜಯ್ ಅವರು ಜಯರಾಜ್ ಪಾತ್ರದಲ್ಲಿ ನಟಿಸಲಿದ್ದಾರೆ. ಲೂಸ್ ಮಾದ ಯೋಗಿ, ಶ್ರುತಿ ಹರಿಹರನ್, ವಸಿಷ್ಠ ಸಿಂಹ, ರಘು ಮುಖರ್ಜಿ ಚಿತ್ರದಲ್ಲಿ ನಟಿಸಲಿದ್ದು ರವಿಚಂದ್ರನ್ ಅವರ ಆಗಮನದಿಂದ ಚಿತ್ರ ಇನ್ನಷ್ಟು ನಿರೀಕ್ಷೆ ಹುಟ್ಟಿಸಿದೆ.

ಅಗ್ನಿ ಶ್ರೀಧರ್ ಕತೆ, ಚಿತ್ರಕತೆ ರಚಿಸಿದ್ದಾರೆ. ಡಾಲಿ ಧನಂಜಯ್ ಚಿತ್ರದ ದೊಡ್ಡ ನಿರೀಕ್ಷೆ ಇಟ್ಟಿದ್ದು, ಸಿನಿಮಾವನ್ನು ಭಿನ್ನವಾಗಿ ತೆರೆಗೆ ತರಲು ಯೋಜನೆ ರೂಪಿಸಿದ್ದಾರೆ. ಸಿನಿಮಾವನ್ನು ಧನಂಜಯ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಸಿನಿಮಾ ಆಗಿರುವ ಇದನ್ನು ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರಕ್ಕಾಗಿ 2 ಕೋಟಿ ರೂ. ವೆಚ್ಚದಲ್ಲಿ ದುಬಾರಿ ಸೆಟ್‌ನ್ನು ಬೆಂಗಳೂರಿನ ಚಿಕ್ಕಮಾರನಹಳ್ಳಿಯ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ನಿರ್ಮಾಣ ಮಾಡಲಾಗಿದೆ.
ಬೆಂಗಳೂರಿನ 80-90ರ ದಶಕದಲ್ಲಿ ನಡೆಯುವ ಕತೆಯನ್ನು ಸಿನಿಮಾ ಹೊಂದಿದೆ. ಅಂದಿನ ಕಾಲಘಟ್ಟವನ್ನು ಸೆಟ್‌ಗಳ ಮೂಲಕ ಮರುಸೃಷ್ಟಿ ಮಾಡಲಾಗುತ್ತಿದ್ದು ಬಾದಲ್ ನಂಜುಂಡಸ್ವಾಮಿ ಸೆಟ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!