ಎಸ್.ಎಲ್.ವಿ ಸಿರಿ ಲಂಬೋದರ ವಿವಾಹ” ಚಿತ್ರಕ್ಕೆ ಚಾಲನೆ

ಸೌರಭ್ ಕುಲಕರ್ಣಿ ನಿರ್ದೇಶನದ “ಎಸ್.ಎಲ್.ವಿ ಸಿರಿ ಲಂಬೋದರ ವಿವಾಹ” ಚಿತ್ರಕ್ಕೆ ಚಾಲನೆ ನೀಡಲಾಗಿದೆ. “ಸಂಭ್ರಮ ಸೌರಭ”ದ ಮೂಲಕ ಮನೆ ಮಾತಾಗಿದ್ದ ಸಂಜೀವ್ ಕುಲಕರ್ಣಿ ಪುತ್ರ ಸೌರಭ್ ಕುಲಕರ್ಣಿ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದು ಚಿತ್ರದ ಮುಹೂರ್ತಕ್ಕೆ ಧರ್ಮಗಿರಿ ಮಂಜುನಾಥನ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.

ನಟ ಸಿಹಿಕಹಿ ಚಂದ್ರು ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕ್ಯಾಮೆರಾ ಚಾಲನೆ ಮಾಡಿದರು. ಮಂಡ್ಯ ರಮೇಶ್, ಮಾಸ್ಟರ್ ಆನಂದ್ ಸೇರಿದಂತೆ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಮರ್ಷಿಯಲ್ ಎಂಟರ್ ಟೈನರ್ ಆಗಿರುವ ಈ ಚಿತ್ರದ ನಿರ್ದೇಶಕ ಸೌರಭ್ ಕುಲಕರ್ಣಿ ರಂಗಭೂಮಿ, ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ. ‌ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸೌರಭ್ ಕುಲಕರ್ಣಿ ಬರೆದಿದ್ದಾರೆ.

ಅನೇಕ ಚಿತ್ರಗಳಲ್ಲಿ ನಟಿಸಿರುವ ಅಂಜನ್ ಎ ಭಾರದ್ವಾಜ್ ಈ ಚಿತ್ರದ ನಾಯಕ ಆಗಿದ್ದಾರೆ. ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ನಾಯಕಿ ಆಗಿ ನಟಿಸಲಿದ್ದಾರೆ. ರಾಜೇಶ್ ನಟರಂಗ, ಸುಂದರ್ ವೀಣಾ, ಬಾಲ ರಾಜವಾಡಿ, ರೋಹಿತ್ ನಾಗೇಶ್, ಶಬರಿ ಮಂಜು, ಹರೀಶ್ ಪ್ರಭಾತ್, ಶಿವಕುಮಾರ್, ಪಿ.ಡಿ.ಸತೀಶ್ ಚಂದ್ರ, ಗಿರೀಶ್ ಜತ್ತಿ, ಸಂತೋಷ್ ಕರ್ಕಿ, ಅಶೋಕ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಸ್ಯ್ರಾಟೊ ವೆಂಚ್ಯೂರ್ಸ್, ಪವಮಾನ ಕ್ರಿಯೇಷನ್ಸ್, ಧೂಪದ ದೃಶ್ಯ ಈ ಚಿತ್ರವನ್ನು ನಿರ್ಮಿಸುತ್ತಿದೆ. ಚಿತ್ರಕ್ಕೆ ಸಂಘರ್ಷ ಕುಮಾರ್ ಸಂಗೀತ ನಿರ್ದೇಶನ, ಕಿಟ್ಟಿ ಕೌಶಿಕ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ, ದೇವಿಪ್ರಕಾಶ್ ಕಲಾ ನಿರ್ದೇಶನ, ಕಂಬಿ ರಾಜು ಅವರ ನೃತ್ಯ ನಿರ್ದೇಶನ ಮಾಡಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!