“ಮೂವಿ ಗ್ಯಾರೇಜ್” ಓಟಿಟಿ ಪ್ಲಾಟ್ ಫಾರಂ ಲೋಕಾರ್ಪಣೆ

ಡಿಜಿಟಲೀಕರಣ ನಮ್ಮ ಬದುಕಿನಲ್ಲಿ ಇನ್ನು ಹಾಸುಹೊಕ್ಕಾಗಿದೆ. ಸಿನಿಮಾ ಮಂದಿರಗಳಿಗೆ ಹೋಗಿ ಗಂಟೆಗಟ್ಟಲೆ ವ್ಯಯಿಸುವ ಮನಸ್ಥಿತಿ ಅಥವಾ ಪರಿಸ್ಥಿತಿ ಇಲ್ಲದ ಸಂದರ್ಭಗಳಲ್ಲಿ ಸಿನಿಮಾಗಳನ್ನು ಮನೆಯಲ್ಲಿ ಕುಳಿತು ಬೇಕೆಂದಾಗ ತನ್ನ ಬಿಡುವಿನ ಸಂದರ್ಭದಲ್ಲಿ ನಮ್ಮದೇ ಮೊಬೈಲ್ ನಲ್ಲಿ ಅಥವಾ ಸ್ಮಾರ್ಟ್ ಟಿ.ವಿಯಲ್ಲಿ ಹಂತಹಂತವಾಗಿ ನೋಡುವ ಸುಲಭೋಪಾಯ ಈ ‘ಓ ಟಿ ಟಿ’ ಪ್ಲಾಟ್ ಫಾರಂಗಳು ಒದಗಿಸುತ್ತಿವೆ.

ಯಕ್ಷಗಾನ, ಭರತನಾಟ್ಯ, ನಾಟಕ, ಪಪ್ಪೆಟ್ ಶೋ ಮತ್ತಿತರ ಪ್ರಮುಖ ಕಲೆಗಳಿಗೆ ಪ್ರೋತ್ಸಾಹಿಸಲು ವೇದಿಕೆಯಾಗಿದೆ ಕನ್ನಡದೇ ಆದ ಓಟಿಟಿ ಪ್ಲಾಟ್ಫಾರ್ಮ್ “ಮೂವಿ ಗ್ಯಾರೇಜ್”

ಇದೆ ಗೌರಿ ಹಬ್ಬದಂದು ಸುಜಾತಾ ಕಾಮತ್ ಅವರ ಆರ್ ಪಿ ಕೆ ಇಂಟರ್ಪ್ರೈಸೆಸ್ನ ಮೊದಲ ಕಂಪೆನಿಯಾದ ‘ಮೂವಿ ಗ್ಯಾರೇಜ್’ ಆಪ್ನನ್ನ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನಿಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಜಯರಾಜ್, ಕಾರ್ಯದರ್ಶಿ ಏನ್ ಎಂ ಸುರೇಶ್, ಹಿರಿಯ ನಿರ್ದೇಶಕರಾದ ದಿನೇಶ್ ಬಾಬು, ಹಿರಿಯ ಛಾಯಾಗ್ರಾಹಕರಾದ ಜೆ.ಜೆ ಕೃಷ್ಣ, ಹಾಗೂ ನಿರ್ಮಾಪಕ ಬಾ. ಮಾ. ಹರೀಶ್, ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ ಇವರಿಂದ ಲೋಕರಪಣೆ ಮಾಡಲಾಯಿತು.

ಕನ್ನಡಕ್ಕೆ ಉತ್ತಮವಾದ ಓಟಿಟಿ ಇಲ್ಲ ಅಥವಾ ನಿರ್ಮಾಪಕರ ಸಹಕಾರಕ್ಕೆ ಯಾವ ಡಿಜಿಟಲ್ ಪ್ಲಾಟ್ಫಾರ್ಮ್ ಇಲ್ಲ ಎಂಬ ಕೊರಗನ್ನು ಈ ಹೊಸ ತಂಡ ನೀಗುಸುವುದು ಎಂದು ಭರವಸೆ ಕೊಟ್ಟಿದೆ. ಅದರಂತೆ ಬೆಂಗಳೂರಿನ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವವನ್ನು ಈ ಬಾರಿ ಮೂವಿ ಗ್ಯಾರೇಜ್ ಆಪ್ನಲ್ಲಿ ಮಾಡಲಾಗಿತ್ತು.

ತಂಡದ ಮತ್ತೊಂದು ಉದ್ದೇಶ ಆಯ್ದ ಚಿತ್ರಗಳನ್ನ ಮಾತ್ರ ಕನ್ನಡದ ಪ್ರೇಕ್ಷರಿಗೆ ಕೊಡುವುದು. ಇದಕ್ಕೆ ಲೋಕಾರ್ಪಣೆಯ ಮುನ್ನ ಹಿರಿಯ ನಟರಾದ ಶ್ರೀನಿವಾಸ್ ಪ್ರಭು ಒಬ್ಬರೇ ನಟಿಸಿರುವ ‘ಬಿಂಬ ಆ ತೊಂಬತ್ತು ನಿಮಿಷಗಳು’ ಎಂಬ ಉತ್ತಮ ಚಿತ್ರವನ್ನು ಮೂವಿ ಗ್ಯಾರೇಜ್ ತಮ್ಮ ಮೊದಲ ಚಿತ್ರವೆಂದು ಹೆಮ್ಮೆಯಿಂದ ಘೋಷಿಸಿತು.

ನಿರ್ಮಾಪಕರ ಹಿತದೃಷ್ಠಿ, ಪಾರದರ್ಶಕವಾದ ವ್ಯಾಪಾರ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿತ್ರಗಳ ಮಾರ್ಕೆಟಿಂಗ್, ಚಲನಚಿತ್ರೋತ್ಸವಗಳಲ್ಲಿ ಭಾಗಿ, ಐ ಓ ಎಸ್ / ಆಂಡ್ರಾಯ್ಡ್ – ಟಿವಿ , ಮೊಬೈಲ್ ಹಾಗೂ ಇನ್ನಿತೀರಾ ಡಿವೈಸ್ಗಳಲ್ಲಿ ಲಭ್ಯ, ಉಚಿತ ವೀಕ್ಷೆಣೆ, ಸೃಜನಾತ್ಮ ಆಲೋಚನೆಗಳಿಗೆ ಬೆಲೆ – ಇವುಗಳು ಮೂವಿ ಗ್ಯಾರೇಜ್ನ ಮುಖ್ಯಾಂಶಗಳು.

ನೀವು ಸಿನಿಮಾ ಆಸಕ್ತರಾಗಿದ್ದಾರೆ, ಅಥವಾ ಸಿನಿಮಾ, ನಾಟಕ, ವೆಬ್ ಸೀರೀಸ್ ಅಥವಾ ಇನ್ಯಾವುದೇ ಕಲೆಯನ್ನು ಕನ್ನಡಲ್ಲಿ ಮಾಡಿದರೆ ಈ ಆಪ್ನ ಡೌನ್ಲೋಡ್ ಮಾಡಿ ಹಾಗೆ ಅವರನ್ನ ಸಂಪರ್ಕ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!