ಡಿ.31ಕ್ಕೆ ‘777 ಚಾರ್ಲಿ’ ತೆರೆಗೆ

ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಚಿತ್ರ ಡಿ.31ರಂದು ಬೆಳ್ಳಿತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಸೆಪ್ಟೆಂಬರ್‌- ಅಕ್ಟೋಬರ್‌ನಲ್ಲೇ ‘777 ಚಾರ್ಲಿ’ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಆದರೆ ಲಾಕ್‌ಡೌನ್‌, ಚಿತ್ರಮಂದಿರಗಳಲ್ಲಿ ಶೇ.50 ಸೀಟಿನ ನಿರ್ಬಂಧದ ಕಾರಣದಿಂದಾಗಿ ಚಿತ್ರವನ್ನು ತಡವಾಗಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಜಿ.ಎಸ್‌.ಗುಪ್ತ, ರಕ್ಷಿತ್‌ ಶೆಟ್ಟಿ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಸಂಗೀತಾ ಶೃಂಗೇರಿ ಚಿತ್ರದ ನಾಯಕಿ ಆಗಿದ್ದು ಚಿತ್ರದಲ್ಲಿ ರಾಜ್‌ ಬಿ.ಶೆಟ್ಟಿ, ಡ್ಯಾನಿಶ್‌ ಸೇಟ್‌ ಮುಖ್ಯಪಾತ್ರ ವಹಿಸಿದ್ದಾರೆ.
ಕಿರಣ್‌ರಾಜ್ ನಿರ್ದೇಶಿಸಿರುವ ‘777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್ ನಾಯಿ ಮುಖ್ಯ ಪಾತ್ರ ನಿರ್ವಹಿಸುತ್ತಿದೆ. ಚಿತ್ರದ ಮೊದಲ ವಿಡಿಯೊ ಹಾಡು ‘ಹೆಂಗೋ ಇದ್ದ ಧರ್ಮ, ತಗಲ್ಲಾಕ್ಕೋತು ಕರ್ಮ..ಈಗಾಗಲೇ ಬಿಡುಗಡೆ ಆಗಿದ್ದು ಧರ್ಮನಿಗೆ ಚಾರ್ಲಿ ನೀಡುವ ಚಿತ್ರ ಹಿಂಸೆ ವೀಕ್ಷಕರ ಗಮನ ಸೆಳೆದಿದೆ.

ರಕ್ಷಿತ್‌ ಶೆಟ್ಟಿ ಅಭಿನಯದ ‘ಕಿರಿಕ್‌ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’ ಚಿತ್ರವೂ ವರ್ಷದ ಕೊನೆಯ ಶುಕ್ರವಾರ ಬಿಡುಗಡೆಯಾಗಿದ್ದು ವಿಶೇಷ ಆಗಿದೆ. ‘777 ಚಾರ್ಲಿ’ ಚಿತ್ರ ಸಹ ಈ ವರ್ಷದ ಕೊನೆಯ ಶುಕ್ರವಾರ ಬಿಡುಗಡೆ ಆಗುತ್ತಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!