ಜನಪ್ರಿಯಲೇಖಕ ಪೂರ್ಣ ಚಂದ್ರ ತೇಜಸ್ವಿ ಅವರ ಕಥೆಯನ್ನು ಆಧರಿಸಿದ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾದ ರೆಟ್ರೋಗ್ರಾಮ್ ಬಿಡುಗಡೆ ಆಗಿದ್ದು ಸದ್ದು ಮಾಡುತ್ತಿದೆ.
ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಗಳು ಈ ಚಿತ್ರ ನಿರ್ಮಾಣ ಮಾಡಿದ್ದು ತೇಜಸ್ವಿ ಅವರ 83 ನೇ ಹುಟ್ಟುಹಬ್ಬದ ಸಲುವಾಗಿ ಸೆ.8ರಂದು ವಿಶಿಷ್ಟ ಪರಿಕಲ್ಪನೆಯ ರೆಟ್ರೋಗ್ರಾಮ್ ನ್ನು ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಒಂದೇ ದಿನ 47 ಸಾವಿರಕ್ಕೂ ಹೆಚ್ಚು ಜನರು ಇದನ್ನು ವೀಕ್ಷಣೆ ಮಾಡಿ ಶಹಬ್ಬಾಷ್ ಎಂದಿದ್ದಾರೆ.
ಯೂ ಟ್ಯೂಬ್ ಮೂಲಕ ʼಜಯಮಾಲಾ ದಮಯಂತಿ ಯಾರಪ್ಪ?ʼ ಎಂಬ ಹಾಡಿನ ಜೊತೆಗೆ ಸಿನಿಮಾದ ಪಾತ್ರ ಪರಿಚಯ, ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ.
ಚಿತ್ರವನ್ನು ಶಶಾಂಕ್ ಸೋಗಲ್ ನಿರ್ದೇಶಿಸಿದ್ದಾರೆ. ರಾಹುಲ್ ರಾಯ್ ಕ್ಯಾಮರಾ, ನವನೀತ್ ಶ್ಯಾಮ್ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ.
ಸಿನಿಮಾದಲ್ಲಿ ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಹಿರಿಯ ನಟ ಮಂಡ್ಯ ರಮೇಶ್, ಚೈತ್ರಾ ಶೆಟ್ಟಿ, ಪೂರ್ಣಚಂದ್ರ ಮೈಸೂರು, ನಾಗಭೂಷಣ್, ಎಂಎಸ್ ಉಮೇಶ್ ಇತರರು ಅಭಿನಯಿಸಿದ್ದಾರೆ.
‘ಡೇರ್‌ಡೆವಿಲ್ ಮುಸ್ತಾಫಾ’ ತೇಜಸ್ವಿ ಅವರು ಬರೆದ ಸಣ್ಣ ಕತೆಯಾಗಿದೆ. ಇದಕ್ಕೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಲಾಗುತ್ತಿದೆ.
ಈ ಹಿಂದೆ ಪೂರ್ಣಚಂದ್ರ ತೇಜಸ್ವಿ ಅವರು ಬರೆದ ‘ಅಬಚೂರಿನ ಪೋಸ್ಟಾಫೀಸು’, ‘ಕುಬಿ ಮತ್ತು ಇಯಾಲ’, ‘ಕಿರಗೂರಿನ ಗಯ್ಯಾಳಿಗಳು’ ಕತೆ ಸಿನಿಮಾದ ರೂಪದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದವು.
Be the first to comment