ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಸಿ. ಜಯರಾಮ್ ಅವರು ಇಂದು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಅವರು ಅನೇಕ ಖ್ಯಾತನಾಮ ನಾಯಕರ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.
ಶಂಕರ್ ನಾಗ್ ನಟನೆಯ ಆಟೋ ರಾಜ, ಅನಂತ್ ನಾಗ್ ನಟನೆಯ ನಾ ನಿನ್ನ ಬಿಡಲಾರೆ, ವಿಷ್ಣುವರ್ಧನ್ – ರಜನಿಕಾಂತ್ ನಟಿಸಿದ್ದ ಗಲಾಟೆ ಸಂಸಾರ, ಶ್ರೀನಾಥ್-ಆರತಿ ಜೋಡಿಯ ಪಾವನ ಗಂಗಾ ಮೊದಲಾದ ಸಿನಿಮಾಗಳನ್ನು ಜಯರಾಮ್ ಅವರು ನಿರ್ಮಿಸಿದ್ದರು.
ಜಯರಾಮ್ ಅವರು ಪುತ್ರ ಮಿಲನ ಪಪ್ರಕಾಶ್ ಅವರನ್ನು ಅಗಲಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ಮಿಲನ, ದರ್ಶನ್ ಅಭಿನಯದ ತಾರಕ್ ಮುಂತಾದ ಸಿನಿಮಾಗಳಿಗೆ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ.
ಸಿ. ಜಯರಾಮ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಸುಮ್ಮನಹಳ್ಳಿ ಸ್ಮಶಾನದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಿರಿಯ ನಿರ್ಮಾಪಕ ಸಿ. ಜಯರಾಮ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.
_________

Be the first to comment