ಸದ್ಯದಲ್ಲೇ ‘ಚಂದನವನ’ ಆಗಲಿದೆಯಾ ‘ಏಸುವನ’!
ರಾಯನ್ ಹೆಸರಿನ ಮೂಲಕ ರಾಯಲ್ ಮತಾಂತರ?!
ಚಿರು ಪುತ್ರನ ‘ರಾಯನ್’ ಹಲವು ಸಂಶಯಗಳನ್ನು ಹುಟ್ಟುಹಾಕುವ ಎಲ್ಲಾ ಲಕ್ಷಣಗಳು ಕಾಣುತ್ತಿವಿಯೇ? ಇದರ ಜೊತೆಗೆ ಸ್ಯಾಂಡಲ್‌ವುಡ್‌ನಲ್ಲಿ ಕ್ರಿಶ್ಚನ್ ಮೆಶನಿರಿಗಳು ಸದ್ದಿಲ್ಲದೇ ಬಂಡವಾಳ ಹೂಡುತ್ತಾ, ಕೇರಳ ಸಿನಿಮಾ ಇಂಡಸ್ಟ್ರಿಯಲ್ಲಿ ಆದ ಅನಾಹುತವನ್ನೂ ಇಲ್ಲೂ ಮಾಡುವ ಉತ್ಸಾಹದಲ್ಲಿದ್ದಾರೆಯೇ? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಈ ಬರಹದ್ದು.
ಮೊದಲಿಗೆ, ಈ ಚಿರು ಮಗನ ಹೆಸರಿನ ವಿವಾದ ಅರ್ಥವಾಗಬೇಕಾದರೆ ಸ್ವಲ್ಪ ಅದರ ಹಿಸ್ಟರಿಯನ್ನು ಕೆದಕಬೇಕು. ‘ಪ್ರಮೀಳಾ ಜೋಷಿ’ ಎಂಬ ಮಹಿಳೆ ಕ್ಯಾಥೊಲಿಕ್ ಕ್ರಿಶ್ಚಿಯನ್ ಆಗಿ ಮತಾಂತರವಾಗಿ, ‘ಪ್ರಮೀಳಾ ಜೋಷಾಯ್’ ಆಗುತ್ತಾರೆ. ಅವರು ಮತ್ತವರ ಕುಟುಂಬ ಮುಂಚೆಯೇ ಆಗಿತ್ತೋ ತದನಂತರದಲ್ಲಿ ಇವರು ಮಾತ್ರವೇ ಆದರೋ ಅವರೇ ಹೇಳಬೇಕಿದೆ. ಏಕೆಂದರೆ ‘ಜೋಷಿ’ ಇದ್ದಕ್ಕಿದ್ದಂತೆ ‘ಜೋಷಾಯ್’ ಆಗಿ ಬದಲಾಗುವುದು ಸುಲಭದ ಮಾತಲ್ಲ. ಸೋ, ಈ ನಡುವೆ ಸಿನಿಮಾ ಸೆಟ್ಟುಗಳಲ್ಲಿ ಒಂದಾಗಿರುತ್ತಿದ್ದ ಸುಂದರ್ ರಾಜ್ ಎಂಬ ಬ್ರಾಹ್ಮಣ ಯುವಕ ಮತ್ತೆ ಪ್ರಮೀಳಾ ಜೋಷಾಯ್ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ. ಮದುವೆಗೂ ಮುಂಚೆಯೇ ಪ್ರಮೀಳಾ ಮತಾಂತರವೆಂಬ ಕಂದಕ್ಕಕ್ಕೆ ಬಿದ್ದಿದ್ದಾರಾ ಗೊತ್ತಿಲ್ಲ. ಬಹುಶಃ ಅದಾಗಲೇ ಮತಾಂತರಗೊಂಡಿರಬೇಕು. ಬಿಕಾಸ್, ಬ್ರಾಹ್ಮಣ ಸುಂದರ್‌ರಾಜ್ ದಂಪತಿಗಳಿಗೆ ಹುಟ್ಟಿದ ಮಕ್ಕಳು ಬ್ರಾಹ್ಮಣರಾಗಬೇಕಿತ್ತು, ಆದರೆ ಇಬ್ಬರೂ ಮಕ್ಕಳು ಸಹ ‘ಅಲೆಲುಯಾ.. ಅಲೆಲುಯಾ..’ ಎಂದು ಸಣ್ಣದರಲ್ಲೇ ಕೂಗಲು ಆರಂಭಿಸಿದ್ದರು. ಸುಂದರ್ ರಾಜ್ ಬ್ರಾಹ್ಮಣನಾಗಿದ್ದು, ತನ್ನ ಧರ್ಮಪತ್ನಿಯ ಮಾತು ಕೇಳಿ ತನ್ನ ಧರ್ಮವನ್ನೇ ಮರೆತರಾ? ಮರೆತಿದ್ದೇ ಆಗಿದ್ದರೆ, ಈಗಲೂ ಯಾಕೆ ತಮ್ಮ ಹೆಂಡತಿಮಕ್ಕಳನ್ನು ಚರ್ಚ್ಗೆ ಕಳುಹಿಸಿ ತಾವು ಮಾತ್ರ ಅವಾಗವಾಗ ಬ್ರಾಹ್ಮಣ ಎಂಬ ಲೇಬಲ್ ಹಾಕಿಕೊಂಡು ಮಠಗಳನ್ನು ಸುತ್ತುತ್ತಾ, ಗುರುಗಳಿಂದ ಆಶೀರ್ವಾದ ತಗೊಳ್ಳುತ್ತಿರುತ್ತಾರೆ? ಸುಂದರ್‌ರಾಜ್ ಅವರ ಪರಧರ್ಮಸಹಿಷ್ಣು ಮನೋಭಾವವೇ ಇದಕ್ಕೆ ಕಾರಣವಾ?
ಕಟ್ಟಾ ಸಂಪ್ರದಾಯಬದ್ಧ ಹಿಂದೂ ಕುಟುಂಬ ಸರ್ಜಾ ಕುಟುಂಬ. ಟ್ಯಾಟೂವಿಂದ ಹಿಡಿದು, ಮುಗಿಲೆತ್ತರದ ಆಂಜನೇಯನ ವಿಗ್ರಹದವರೆಗೆ.. ತಮ್ಮ ಬದುಕಿನ ಪ್ರತೀ ಕ್ಷಣದಲ್ಲೂ ಆಂಜನೇಯನನ್ನು ಸದಾ ಪೂಜಿಸುವ ಇದೇ ಅರ್ಜುನ್ ಸರ್ಜಾ ಆಂಜನೇಯನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುಂದಾದಾಗ ಎದುರಿಸಿದ ತೊಂದರೆಯ ಹಿಂದೆ ಅದೆಷ್ಟು ಮತಾಂತರಿಗಳ ಕೈವಾಡವಿತ್ತೋ? ಅಂತಹ ಹನುಮ ಭಕ್ತ ಕುಟುಂಬಕ್ಕೆ ಈ ಮೇಘನಾ ಎಂಬ ಕ್ರಿಶ್ಚಿಯನ್ ಹುಡುಗಿ ಪ್ರೇಮದ ಹೆಸರಿನಲ್ಲಿ ಎಂಟ್ರಿಯಾಗಿ, ಚರ್ಚ್ ನಲ್ಲಿ ಗವನ್ ತೊಟ್ಟು, ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದೂ ಆಯ್ತು. ಈಗ ಆಕೆಯ ಮಗನಿಗೆ ಕ್ರಿಶ್ಚಿಯನ್ ಹೆಸರು! ಆದರೆ ಮೇಘನಾ ಪ್ರಕಾರ ರಾಯನ್ ಎಂಬ ಹೆಸರು ಹಿಂದೂ – ಕ್ರಿಶ್ಚಿಯನ್ ಹೆಸರಂತೆ! ಅವರ ಪ್ರಕಾರ ಈ ಹೆಸರಿನ ಅರ್ಥ ‘ಸ್ವರ್ಗದ ಬಾಗಿಲು ತೆಗೆದ ಯುವರಾಜ’ ಎಂದು. ಇರಲಿ ಅರ್ಥವೆನೋ ಅದ್ಭುತವಾಗಿದೆ, ಆದರೆ ಇದೇ ಅರ್ಥ ಕೊಡುವ ಹಿಂದೂ ಹೆಸರುಗಳು ಇವರಿಗೆ ಗಮನಕ್ಕೆ ಬಂದಿರಲಿಕ್ಕಿಲ್ಲ ಪಾಪ! ಇನ್ನು ರಾಯನ್ ಅನ್ನುವ ಹೆಸರು ಹಿಂದುಗಳಲ್ಲಿ ದರ‍್ಬೀನು ಹಾಕಿದರೂ ಸಿಗದು. ರಾಯನ್ ಎಂಬ ಹೆಸರು ಇರುವುದು ಕ್ರಿಶ್ಚಿಯನ್ ಧರ್ಮದಲ್ಲಿ ಮಾತ್ರ. ರಾಯನ್ ಸ್ಮಿತ್, ರಾಯನ್ ಜಾನ್, ಜೋಸೆಫ್ ರಾಯನ್… ಹೀಗೆ ಐರಿಶ್ ಮೂಲದ ಹೆಸರು ‘ರಾಯನ್’ ಕೇವಲ ಕ್ರೈಸ್ತರಲ್ಲಿ ಮಾತ್ರ ಬಳಕೆಯಾಗುತ್ತಿರುವುದು. ಈ ಸಂದರ್ಭದಲ್ಲಿ ಚಿರು ಇದ್ದಿದ್ದರೆ!
ಪ್ರೇಯಸಿಯ ಮನಸ್ಸಿಗೆ ನೋವಾಗುತ್ತದೆಯೆಂದು, ಒಬ್ಬ ತನ್ನ ಧರ್ಮ ಬಿಟ್ಟ. ಇದರಿಂದ ಇಡೀ ಕುಟುಂಬ ‘ಅಮೆನ್’ ಎಂದು ಜಪಿಸತೊಡಗಿತು. ಆತನ ಮಗಳು ಹಿಂದೂವನ್ನು ಮದುವೆಯಾಗಿ, ಆ ಹಿಂದೂ ಕುಟುಂಬವನ್ನೂ ಮತಾತಂರಗೊಳಿಸಿ, ಧೈರ್ಯವಾಗಿ ಹಿಂದೂ ಕುಡಿಗೆ ಕ್ರೈಸ್ತ ಹೆಸರಿಟ್ಟು ಅದಕ್ಕೆ ಸಮಜಾಯಿಸಿ ಕೊಡುತ್ತಲೇ ಸದ್ದಿಲ್ಲದೇ ತನ್ನ ಅಮ್ಮ ಶುರು ಹಚ್ಚಿಕೊಂಡ ಮತಾಂತರದ ಚೈನ್ ಅನ್ನು ಮುಂದುವರಿಸಿದಳು ಇನ್ನೊಬ್ಬಳು ಮಹಾ ತಾಯಿ!
ಹೌದು, ಈ ದೇಶದಲ್ಲಿ ಯಾರು ಯಾವ ಧರ್ಮವನ್ನೂ ಬೇಕಾದರೂ ಸ್ವೀಕರಿಸಬಹುದು. ಆದರೆ, ಇಲ್ಲಿ ಆಗುತ್ತಿರೋದು ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಅನ್ನೋದೆ ಅಪಾಯ. ಇನ್ನು, ‘ರಾಯನ್’ ಎಂದು ಹೆಸರಿಟ್ಟು ‘ಅದು ಕ್ರೈಸ್ತ ಹೆಸರು ನಾವು ಕ್ರೈಸ್ತ ಧರ್ಮ ಪಾಲಿಸ್ತಿದ್ದೀವಿ.. ರಾಯನ್ ಕೂಡ ಕ್ರೈಸ್ತಧ ರ್ಮವನ್ನೇ ಪಾಲಿಸ್ತಾನೆ..’ ಎಂದು ಹೇಳಿದ್ದರೆ ಮುಗಿದು ಹೋಗುತ್ತಿತ್ತು. ಆದರೆ, ಅದಾಗುವುದಿಲ್ಲ ಯಾಕೆಂದರೆ ಅವರಿಗೆ ಹಿಂದೂಗಳೂ ಬೇಸರಿಸಬಾರದು, ಮುಂದೆ ಮತಾಂತರಕ್ಕೆ ಬೇಕಾಗಿರೋದು ಹಿಂದುಗಳೇ ತಾನೇ, ಇದೊಂದು ಅದ್ಭುತ ಸಂಚು!
ಇದು ಹೀಗೆ ಮುಂದುವರಿದರೆ, ಭಾರತ ಕ್ರಿಶ್ಚಿಯನ್ ಮಯ ಆಗೋಕೆ ಬಹಳ ಸಮಯ ಬೇಕಾಗಿಲ್ಲಾ. ಅದಕ್ಕೆಂದೆ ವ್ಯವಸ್ಥಿತವಾಗಿ ಕಾರ್ಯ ನಡೆಯುತ್ತಿದೆ, ನೋಡಿ ಪ್ರಮೀಳಾ ಜೋಷಿ, ಜೋಷಾಯ್ ಆಗಿ ಇಂದು ಎರಡು ಕುಟುಂಬಗಳ ಮೂರು ತಲೆಮಾರು ಮತಾಂತರವಾಗಿದೆ. ಅದೂ ಉನ್ನತವರ್ಗದ, ಪ್ರತಿಷ್ಠಿತ, ಹೆಸರುಳ್ಳ, ಸಮಾಜದ ಮುಖ್ಯವಾಹಿನಿಯ ಕುಟುಂಬಗಳು. ಇವರನ್ನೇ ಬ್ರೈನ್ ವಾಶ್ ಮಾಡಲಾಗುತ್ತದೆ ಎಂದರೆ ಒಂದು ಹೊತ್ತು ಊಟಕ್ಕೆ ಪರದಾಡುವ ಬಡ ಕುಂಟುಂಬಗಳ ಅಷ್ಟೂ ಸದಸ್ಯರು ಇದೇ ಏಟಿಗೆ, ಅಮಿಷದಿಂದಾಗಿ ಮತಾಂತರಗೊಳ್ಳುತ್ತಿರುವುದರಲ್ಲಿ ಅಚ್ಚರಿಯಿಲ್ಲ.
ಸರ್ಜಾ ಕುಟುಂಬದ ಜಾಗದಲ್ಲಿ ಬಡಕುಟುಂಬ ಯಾವುದಾದರೂ ಇದ್ದರೆ ಇವತ್ತು ಮತಾಂತರದ ಬಗ್ಗೆ ನ್ಯಾಶನಲ್ ಲೆವೆಲ್ ಸುದ್ದಿಯಾಗುತ್ತಿತ್ತು. ಸಾಮಾಜಿಕ ಜಾಲತಾಣಗಳು ಇಷ್ಟೊತ್ತಿಗಾಗಲೇ ಜೋರಾಗಿ ಸದ್ಧು ಮಾಡಿಬಿಟ್ಟಿರುತ್ತಿದ್ದವು. ಈ ಪ್ರಕರಣದಲ್ಲಿ ಗುಟ್ಟಾಗಿವೆ, ಕಾರಣ ಸೆಲೆಬ್ರೆಟಿಗಳು ಮತ್ತು ನಾಜೂಕಿನ ಉತ್ತರಗಳು. ‘ಖಟ್ಟರ್’ ಎಂದು ಬಾಯಿಬಡ್ಕೊಂಡು, ಎಲ್ಲೆಲ್ಲಿ ಲಾಭವಾಗುತ್ತದೋ, ಅಲ್ಲಲ್ಲಿ ಮಾತ್ರ ಇರೋ ಧರ್ಮ ರಕ್ಷಕರು ಎಲ್ಲಿಹೋದರೋ?
ಒಟ್ಟಿನಲ್ಲಿ, ಹನುಮಾನ್ ಭಕ್ತ ಅರ್ಜುನ್ ಕುಟುಂಬದಲ್ಲಿ ಈ ಬಿರುಗಾಳಿ ಏಳಬಾರದಿತ್ತು. ಇದು ಧರ್ಮಗಳ ಸಂಘರ್ಷ, ಈ ಸಂಘರ್ಷ ‘ರಾಯನ್’ ಹೆಸರಿನಲ್ಲಿ ರಾಯಲ್ ಆಗಿ ಮುಂದುವರೆಯಿಲಿದೆ.
ಇವತ್ತು ಮತಾಂತರದ ಬಿಸಿ, ಕೇವಲ ಸರ್ಜಾ ಕುಟುಂಬಕ್ಕಷ್ಟೇ ಅಲ್ಲಾ.. ಇಡೀ ಸ್ಯಾಂಡಲ್‌ವುಡ್‌ಗೆ ಬಡಿದಿದೆ. ಸದ್ದಿಲ್ಲದೆ ‘ಚಂದನವನವ’ನ್ನು ‘ಏಸುವನ’ ಮಾಡುವ ಸಂದೇಹ ಮೂಡಿದೆ. ಏಸುವನ್ನು ಮಾರಾಟ ಮಾಡಲು ಹೊರಟಿರುವ ಮತಾಂಧ ‘ಅಲೆಲೂಯಾ’ಗಳು ಕನ್ನಡ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದೆ.
ಮತಾಂತರ ಮನಸ್ಸಿನ ಕ್ರಿಯೇಟಿವ್ ಮೈಂಡ್ ಗಳು, ತಮ್ಮ ಚಿತ್ರ ಟೈಟಲ್ ಮೂಲಕ ಏಸುವನ್ನು ಪ್ರಮೋಟ್ ಮಾಡುತ್ತಾ, ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ದರ್ಶನ್ ಅಭಿನಯದ ‘ರಾಬರ್ಟ್’ ಇತ್ತೀಚಿಗಿನ ಉದಾಹರಣೆಯಾದರೆ, ಈ ಹಿಂದೆಯೂ ಈ ‘ಏಸುವನ’ ಮಾಡುವ ಮಹಾನ್ ಕೆಲಸ ನಡೆಯುತ್ತಲೇ ಬಂದಿದೆ. ಮುಂದೆಯೂ ನಡೆಯಲಿದೆ.. ಜೇಮ್ಸ್, ಸ್ಟಾಲಿನ್.. ಹೀಗೆ ಸಾಲು ಸಾಲು ಚಿತ್ರಗಳು ಬರಲಿದೆ. ಅದೂ ದೊಡ್ಡ ದೊಡ್ಡ ಬಜೆಟ್‌ನಲ್ಲಿ! ಇದು ಒಂದು ರೀತಿಯಲ್ಲಿ ಕಮರ್ಷಿಯಲ್ಲಾಗಿ, ಮನೋರಂಜನೆ ಮೂಲಕ ಜನಸಾಮಾನ್ಯರ ತಲೆಯಲ್ಲಿ ಮತಾತಂರದ ಬೀಜ ಬಿತ್ತುವ ಹುನ್ನಾರ ಇರಬಹಬುದಾ? ಯಾಕೆಂದರೆ ಇದೇ ಹುನ್ನಾರದ ಮೂಲಕ ಇವತ್ತು ಮಲಯಾಳಂ ಇಂಡಸ್ಟ್ರೀ ಯನ್ನು ಆಳುತ್ತಿರುವುದು ಮತಾಂಧ ಕ್ರೈಸ್ತ ರೇ! ಈ ನಿಟ್ಟಿನಲ್ಲಿ ಚಂದನವನದ ಮುಂದಿನ ಭವಿಷ್ಯ ಏನು ಎಂಬುದನ್ನು ಕಾದು ನೋಡಬೇಕಿದೆ. ಅಲ್ಲಿವರೆಗೆ.. ಪರಲೋಕದಲ್ಲಿರುವ ತಂದೆಯೇ ನಿನಗೆ ಸ್ತೋತ್ರವಾಗಲಿ.. ಅಮೇನ್!
@ಬಿಸಿನಿಮಾಸ್ ಡಾಟ್ ಇನ್
Be the first to comment