ಸೆ.10ರಂದು ಡಿ ಬಾಸ್ ಟೈಟಲ್ ರಿವೀಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಹೊಸ ಸಿನಿಮಾದ ಟೈಟಲ್ ಸೆಪ್ಟಂಬರ್ 10ರಂದು ಗಣೇಶ ಚತುರ್ಥಿಯ ಶುಭ ದಿನದಂದು ಬಿಡುಗಡೆಯಾಗಲಿದೆ.

ದರ್ಶನ್ ಅವರ 55ನೇ ಸಿನಿಮಾವನ್ನು ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರ ಮೀಡಿಯ ಹೌಸ್ ಸ್ಟುಡಿಯೋ ಬ್ಯಾನರ್‌ನಲ್ಲಿ ನಿರ್ಮಿಸಲಾಗುತ್ತಿದೆ. ಸಿನಿಮಾ ಮೀಡಿಯ ಹೌಸ್ ಸ್ಟುಡಿಯೋದಲ್ಲಿ ಮೂಡಿಬರುತ್ತಿರುವ ದರ್ಶನ್ ಅವರ 10ನೇ ಸಿನಿಮಾ ಇದಾಗಲಿದೆ.

ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಯಜಮಾನ ಸಿನಿಮಾಗೂ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹರಿಕೃಷ್ಣ ಎರಡನೇ ಬಾರಿ ಈ ಚಿತ್ರದ ಮೂಲಕ ದರ್ಶನ್ ಅವರಿಗೆ ನಿರ್ದೇಶನ ಮಾಡಲಿದ್ದಾರೆ.

ಸೆಪ್ಟಂಬರ್ 10ರಂದು ಚಿತ್ರದ ಟೈಟಲ್ ಜೊತೆಗೆ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ. ದರ್ಶನ್ ಕೊನೆಯದಾಗಿ ರಾಬರ್ಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಹಳ ಸಮಯದ ನಂತರ ದರ್ಶನ್ ಅವರ ಚಿತ್ರದ ಟೈಟಲ್ ರಿಲೀಸ್ ಆಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ.

2019ರಲ್ಲಿ ಸದ್ದು ಮಾಡಿದ್ದ ‘ಯಜಮಾನ’ ಚಿತ್ರತಂಡವು ಈ ಸಿನಿಮಾದ ಮೂಲಕ ಇದೀಗ ಮತ್ತೆ ಒಂದಾಗುತ್ತಿದೆ. ಇದು ಸಹಜವಾಗಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ದರ್ಶನ್ ಅವರು ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶಿಸಿರುವ ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಿದ್ದು ಇದು ಅವರ 54ನೇ ಸಿನಿಮಾವಾಗಿದೆ. ರಾಕ್ ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
_________

Be the first to comment

Leave a Reply

Your email address will not be published. Required fields are marked *

Translate »
error: Content is protected !!