ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುವಲ್ಲಿ ಹೆಸರು ಮಾಡಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ನಟ ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ ಸಿನಿಮಾ ಮಾಡಲಿದ್ದಾರೆ.
ಸಿನಿಮಾ ಮಾಡುವ ಸಂಬಂಧ ಅವರು ಈಗಾಗಲೇ ಪುನೀತ್ ರಾಜ್‌ಕುಮಾರ್ ಜೊತೆಗೆ ಮಾತುಕತೆ ಮಾಡಿದ್ದಾರೆ. ಹೊಸ ಸಿನಿಮಾದ ಬಗ್ಗೆ ಮಾಹಿತಿ ಮುಂದಿನ ಕೆಲವು ದಿನಗಳಲ್ಲಿ ಘೋಷಣೆ ಆಗುವ ನಿರೀಕ್ಷೆ ಇದೆ.
ಇದರ ಜೊತೆಗೆ ಉಮಾಪತಿ ಅವರು, ನಟ ಯಶ್ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದಾರೆ. ದೊಡ್ಡ ಬಜೆಟ್ ನ ಈ ಸಿನಿಮಾ ಮುಂದಿನ ದಿನಗಳಲ್ಲಿ ಸದ್ದು ಮಾಡುವ ನಿರೀಕ್ಷೆ ಇದೆ.
ಈಗಾಗಲೇ ಉಮಾಪತಿ ಸುದೀಪ್ ಜೊತೆಗೆ ‘ಹೆಬ್ಬುಲಿ’, ದರ್ಶನ್ ಜೊತೆಗೆ ‘ರಾಬರ್ಟ್’, ‘ಒಂದಲ್ಲಾ ಎರಡಲ್ಲ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ದರ್ಶನ್ ಜೊತೆಗೆ ಎರಡು ಚಿತ್ರಗಳನ್ನು ನಿರ್ಮಾಣ ಮಾಡುವುದಾಗಿ ಈ ಹಿಂದೆ ಉಮಾಪತಿ ಘೋಷಣೆ ಮಾಡಿದ್ದರು. ಆದರೆ ಇಬ್ಬರ ನಡುವೆ ಚೆಕ್ ವಂಚನೆ ಹಗರಣದಲ್ಲಿ ಮನಸ್ತಾಪ ಉಂಟಾದ ಕಾರಣ ದರ್ಶನ್ ಸಿನಿಮಾ ನಿರ್ಮಾಣದತ್ತ ಉಮಾಪತಿ ಆಸಕ್ತಿ ತೋರಿಲ್ಲ ಎಂದು ಹೇಳಲಾಗುತ್ತಿದೆ.
ಬೆಂಗಳೂರು-ಕನಕಪುರ ರಸ್ತೆಯಲ್ಲಿ 25 ಎಕರೆ ಜಮೀನಿನಲ್ಲಿ ಉಮಾಪತಿ 175 ಕೋಟಿ ರೂಪಾಯಿ ವೆಚ್ಚದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುತ್ತಿದ್ದು ಇದರ
ಕಾಮಗಾರಿ ಪ್ರಗತಿಯಲ್ಲಿದೆ.
ಉಮಾಪತಿ ನಿರ್ಮಾಣ ಮಾಡುತ್ತಿರುವ ‘ಮದಗಜ’ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗುವ ನಿರೀಕ್ಷೆ ಹೊಂದಲಾಗಿದೆ.
______

Be the first to comment