ಹಿಂದಿಯಲ್ಲಿ ರಾಬರ್ಟ್ ದಾಖಲೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಹಿಂದಿ ಡಬ್ ಚಿತ್ರ ಯೂ ಟ್ಯೂಬ್ ನಲ್ಲಿ 20 ಮಿಲಿಯನ್ ವೀಕ್ಷಣೆಯ ದಾಖಲೆ ಮಾಡಿದೆ.

ಯೂ ಟ್ಯೂಬ್ ಗೆ ಅಪ್‌ ಲೋಡ್ ಆದ ಕೇವಲ 5 ದಿನದಲ್ಲಿ ರಾಬರ್ಟ್ ಹಿಂದಿ ಚಿತ್ರ 20 ಮಿಲಿಯನ್ ವೀಕ್ಷಣೆ ಕಂಡಿದೆ. ಆರ್‌ಕೆಡಿ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್ ರಾಬರ್ಟ್ ಡಬ್ಬಿಂಗ್ ಚಿತ್ರವನ್ನು ಪೋಸ್ಟ್ ಮಾಡಿದೆ. ರಾಬರ್ಟ್ ಸಿನಿಮಾ ಮೊದಲ 2 ದಿನದಲ್ಲಿ 10 ಮಿಲಿಯನ್, 5 ದಿನದಲ್ಲಿ 20 ಮಿಲಿಯನ್ ವೀಕ್ಷಣೆ ಕಂಡಿದೆ. ದರ್ಶನ್ ಸಿನಿಮಾಗಳ ಪೈಕಿಯೂ ಅತಿ ವೇಗವಾಗಿ 20 ಮಿಲಿಯನ್ ವೀಕ್ಷಣೆ ಕಂಡಿರುವ ಸಿನಿಮಾ ರಾಬರ್ಟ್ ಆಗಿದೆ ಎಂದು ಹೇಳಲಾಗಿದೆ.

ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡಿದ್ದಾರೆ. ರಾಬರ್ಟ್ ಚಿತ್ರ ದರ್ಶನ್ ಅವರ ಈ ವರ್ಷದ ಮೊದಲ ಹಿಟ್ ಚಿತ್ರ ಆಗಿದ್ದು ಇದರಲ್ಲಿ ಆಶಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಜಗ್ಗು ಬಾಯ್, ರವಿಶಂಕರ್, ವಿನೋದ್ ಪ್ರಭಾಕರ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

ದರ್ಶನ್ ನಟಿಸಿರುವ ಚಿತ್ರಗಳಾದ ಗಜ (ಗಜ ಠಾಕೂರ್), ಪೊರ್ಕಿ (ಮೈ ಹೂ ವಾಂಟೆಡ್), ಬಾಸ್ (ಡಬಲ್ ಬಾಸ್), ಚಿಂಗಾರಿ (ಚಿಂಗಾರ), ಅಂಬರೀಶ (ಭಾಗಿ ದಿ ರೆಬಲ್), ಜಗ್ಗುದಾದ (ಖತರ್‌ನಾಕ್ ಖಿಲಾಡಿ 3), ಐರಾವತ (ವರ್ದಿವಾಲ ದಿ ಐರನ್ ಮ್ಯಾನ್), ವಿರಾಟ್ (ವಿರಾಟ್), ಬೃಂದಾವನ (ಪ್ರೇಮಲೀಲಾ) ಡಬ್ ಆಗಿ ಯೂಟ್ಯೂಬ್ ಹಾಗೂ ಟಿವಿಯಲ್ಲಿ ಪ್ರಿಮೀಯರ್ ಶೋ ಕಂಡಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!