ತನ್ನ ವಿರುದ್ಧ ಕೆಟ್ಟದಾಗಿ ಟ್ವೀಟ್ ಮಾಡಲಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಕೋರಿ ನಟಿ ಅನಿತಾ ಭಟ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
” ತನ್ನ ವಿರುದ್ಧ ಕನ್ನಡಿಗ ಎನ್ನುವ ಹೆಸರಿನ ಖಾತೆ ಹೊಂದಿರುವ ಅನಾಮಿಕ ವ್ಯಕ್ತಿಯಿಂದ ಕೆಟ್ಟ ಟ್ವೀಟ್ ಬರುತ್ತಿದೆ. ಈ ರೀತಿ ಟ್ವೀಟ್ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ವಹಿಸಬೇಕು” ಎಂದು ಅವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಂಪ್ಲೇಟ್ ಪ್ರತಿಯನ್ನು ಟ್ವೀಟ್ ಮಾಡಿರುವ ಅನಿತಾ ಭಟ್, “ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳಬಹುದು. ವೈಯಕ್ತಿನ ನಿಂದನೆ,ದಾಳಿ ಮಾಡುವ ವೇದಿಕೆ ಅಲ್ಲ. ನಮ್ಮ ಜೀವನಕ್ಕೆ ನಾವೇ ಜವಾಬ್ದಾರರಾದಾಗ ಬೇರೆಯವರಿಗೆ ಮಾತನಾಡುವ ಹಕ್ಕಿಲ್ಲ. One red mark on your profile and your life is spoiled. Take care and be safe. Thanks to @CybercrimeCID” ಎಂದು ಬರೆದಿದ್ದಾರೆ.
ಅನಿತಾ ಭಟ್ ಅವರು ದೂರು ನೀಡಿರುವ ಬಗ್ಗೆ ಮಾಡಿರುವ ಟ್ವೀಟ್ ಗೆ ಸಾಕಷ್ಟು ಪರ- ವಿರೋಧದ ಟ್ವೀಟ್ ಗಳು ಬಂದಿವೆ.
ಕೆಲವರು ದೂರು ನೀಡಿರುವುದನ್ನು ಸಮರ್ಥಿಸಿದರೆ ಇನ್ನೂ ಕೆಲವರು ನೀವು ಸಂವಿಧಾನದ ವಿರುದ್ಧವಾಗಿ ಮಾತನಾಡಿರುವುದು, ಗಾಂಧಿಯನ್ನು ಕೊಂದ ಗೋಡ್ಸೆ ಪರ ವಹಿಸಿರುವುದು ತಪ್ಪು ಎಂದು ಹೇಳಿದ್ದಾರೆ.
ಈ ಹಿಂದೆ ಅನಿತಾ ಭಟ್ ಅವರು ಬ್ರಾಹ್ಮಣ್ಯ ಹಾಗೂ ಗೋಡ್ಸೆ ಕುರಿತು ಟ್ವೀಟ್ ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಗೋಡ್ಸೆ ದೇಶಭಕ್ತ ಎಂದ ಅನಿತಾ ಭಟ್ ಅಭಿಪ್ರಾಯಕ್ಕೆ ಹಲವರಿಂದ ತೀವ್ರ ವಿರೋಧದ ಕಮೆಂಟ್ ಗಳು ಬಂದಿದ್ದವು.
Be the first to comment