ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿರುವುದನ್ನು ಸಂಭ್ರಮಿಸುತ್ತಿರುವ ಭಾರತೀಯ ಕೆಲ ಮುಸ್ಲಿಮರನ್ನು ಬಾಲಿವುಡ್ ನಟ ನಾಸಿರುದ್ದೀನ್ ಶಾ ಟೀಕಿಸಿದ್ದಾರೆ.
ತಾಲಿಬಾನ್ ಬಗ್ಗೆ ಅನುಭೂತಿ ಹೊಂದಿರುವ ಭಾರತೀಯ ಮುಸ್ಲಿಮರನ್ನು ಅವರು ವಿಡಿಯೋ ಒಂದರಲ್ಲಿ ಟೀಕಿಸಿದ್ದಾರೆ. ಈ ವಿಡಿಯೋ ಟ್ವಿಟರ್‌ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
“ತಾಲಿಬಾನಿಗಳು ಅಧಿಕಾರಕ್ಕೆ ಬಂದಿರುವುದು ವಿಶ್ವಕ್ಕೆ ಕಳವಳಕಾರಿಯಾಗಿದೆ. ಭಾರತದ ಕೆಲವು ಮುಸ್ಲಿಮರು ಇದನ್ನು ಸಂಭ್ರಮಿಸುತ್ತಿರುವುದು ಕೂಡಾ ಅಷ್ಟೇ ಕಳವಳಕಾರಿ ಆಗಿದೆ. ಅನಾಗರಿಕರನ್ನು ಓಲೈಸುವ ಆಚರಣೆಗಳು ಕಡಿಮೆ ಅಪಾಯಕಾರಿಯಲ್ಲ. ಭಾರತೀಯ ಮುಸ್ಲಿಮರು ತಮ್ಮ ಧರ್ಮದಲ್ಲಿ ಆಧುನಿಕತೆ ಮತ್ತು ಸುಧಾರಣೆಗಳನ್ನು ಬಯಸುತ್ತಾರೆಯೇ ಅಥವಾ ಅವರು ಹಳೆಯ ಅನಾಗರಿಕ ಮೌಲ್ಯಗಳಿಗೆ ಮರಳಲು ಬಯಸುತ್ತಾರೆಯೇ ಎಂದು ನಾನು ಪ್ರತಿಯೊಬ್ಬ ಹಿಂದೂಸ್ತಾನಿ ಮುಸಲ್ಮಾನರಲ್ಲಿ ಕೇಳಲು ಬಯಸುತ್ತೇನೆ” ಎಂದು ಅವರು ಪ್ರಶ್ನಿಸಿದ್ದಾರೆ.
“ನಾನು ಹಿಂದೂಸ್ತಾನಿ ಮುಸಲ್ಮಾನ. ಹಿಂದೂಸ್ತಾನಿ ಇಸ್ಲಾಂ, ಇಸ್ಲಾಂ ಧರ್ಮಕ್ಕಿಂತ ಭಿನ್ನವಾಗಿದೆ. ನಾವು ಅದನ್ನು ಗುರುತಿಸಲು ಸಾಧ್ಯವಾಗದ ಸಮಯ ಬಾರದಂತೆ ನಾನು ದೇವರನ್ನು ಪ್ರಾರ್ಥಿಸುತ್ತೇನೆ” ಎಂದು ಅವರು ಕಳವಳದಿಂದ ಹೇಳಿದ್ದಾರೆ.
Absolutely! 💯
Taliban is a curse! pic.twitter.com/Bs6xzbNZW8— Sayema (@_sayema) September 1, 2021

Be the first to comment