ಮುಂದಿನ ತಿಂಗಳು ಕೋಟಿಗೊಬ್ಬ-3 ರಿಲೀಸ್

ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್ 14 ರಂದು ರಿಲೀಸ್ ಆಗಲಿದೆ.

ದಸರಾ ಹಬ್ಬವನ್ನು ಗಮನದಲ್ಲಿ ಇಟ್ಟುಕೊಂಡು ಚಿತ್ರತಂಡ ಅಧಿಕೃತವಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಶೀಘ್ರವೇ ಘೋಷಣೆ ಮಾಡಲಿದೆ. ಸರ್ಕಾರ ಚಿತ್ರ ಮಂದಿರಗಳಲ್ಲಿ ಶೇ.100 ರಷ್ಟು ಸೀಟು ಭರ್ತಿಗೆ ಘೋಷಣೆ ಮಾಡುವುದನ್ನು ಚಿತ್ರ ತಂಡ ಎದುರು ನೋಡುತ್ತಿದೆ.

ಕೋಟಿಗೊಬ್ಬ 3 ಸಿನಿಮಾಗೆ ಸುದೀಪ್ ಕಥೆ ಬರೆದಿರುವುದು ವಿಶೇಷ ಆಗಿದೆ. ಶಿವಕಾರ್ತಿಕ್ ನಿರ್ದೇಶನದ ಈ ಸಿನಿಮಾವನ್ನು ಸೂರಪ್ಪ ಬಾಬು ನಿರ್ಮಿಸಿದ್ದಾರೆ.

ಸಿನಿಮಾದಲ್ಲಿ ಕಿಚ್ಚ ಸುದೀಪ್​ ಸತ್ಯ ಹಾಗೂ ಶಿವನಾಗಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಮಡೋನ್ನಾ ಸೆಬಾಸ್ಟಿಯನ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್ ನಟರಾದ ಶ್ರದ್ಧ ದಾಸ್, ಅಫ್ತಾಬ್ ಶಿವದಾಸನಿ ಮತ್ತು ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ.

ಈಗಾಗಲೇ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಆಗಿದ್ದು ಸುದೀಪ್ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.

ಚಿತ್ರತಂಡ ಏಪ್ರಿಲ್ ಕೊನೆಯ ವಾರದಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿತ್ತು. ಆದರೆ ಕೊರೋನಾ ಎರಡನೇ ಅಲೆಯಿಂದಾಗಿ ಬಿಡುಗಡೆಯ ದಿನಾಂಕವನ್ನು ಅನಿವಾರ್ಯವಾಗಿ ಮುಂದೂಡಬೇಕಾದ ಪ್ರಸಂಗ ಉಂಟಾಯಿತು.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಶೇಖರ್ ಚಂದ್ರು ಅವರ ಛಾಯಾಗ್ರಹಣವಿದೆ.
__________

Be the first to comment

Leave a Reply

Your email address will not be published. Required fields are marked *

Translate »
error: Content is protected !!