ದಿಯಾ ಖ್ಯಾತಿಯ ಪೃಥ್ವಿ ಅಂಬರ್ , ಮಾನ್ವಿತಾ ಕಾಮತ್ ನಟಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ ‘ಹ್ಯಾಪಿ ಲಿ ಮ್ಯಾರೀಡ್’ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದೆ.
ಈ ಚಿತ್ರ ಸದ್ಯದಲ್ಲೇ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಚಿತ್ರದ ಮೋಷನ್ ಪೋಸ್ಟರ್ ನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಿಡುಗಡೆ ಮಾಡಿ ಚಿತ್ರರಂಗಕ್ಕೆ ಶುಭಹಾರೈಸಿದ್ದಾರೆ.
ಮದುವೆಯಾದ ಬಳಿಕ ಪತಿ-ಪತ್ನಿಯ ನಡುವೆ ಬದಲಾಗುವ ಮನಸ್ಥಿತಿಯನ್ನು ತೋರಿಸುವ ಚಿತ್ರ ಇದಾಗಿದೆ. ಗಂಡ ಹೆಂಡತಿಯ ಜಗಳ ಸಾಮಾನ್ಯವಾಗಿ ಎಲ್ಲಾ ಕಡೆ ನಡೆಯುತ್ತದೆ. ಆದರೆ ಹೊಸ ರೀತಿಯಲ್ಲಿ ಕಥೆಯನ್ನು ಹೇಳಲು ಚಿತ್ರತಂಡ ಮುಂದಾಗಿದೆ.
“ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಡಬ್ಬಿಂಗ್ ಪೋಸ್ಟ್ ಪ್ರೋಡಕ್ಷನ್ ಕೆಲಸ ಬಾಕಿ ಇದೆ” ಎಂದು ಚಿತ್ರದ ನಾಯಕ ನಟ ಪೃಥ್ವಿ ಅಂಬರ್ ತಿಳಿಸಿದ್ದಾರೆ.
ಚಿತ್ರದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿ, ಧರ್ಮಣ್ಣ ಮೊದಲಾದವರಿದ್ದಾರೆ. ಅರುಣ್ ಕುಮಾರ್ ಎಂ ಮತ್ತು ಸಾಬು ಅಲೋಷಿಯಸ್ ನಿರ್ದೇಶನವಿದೆ. ಚಿತ್ರಕ್ಕೆ ಬಿ.ಜಿ. ಅರುಣ್, ಜೋಸ್ ಕುಟ್ಟಿಮದತ್ತಿಲ್, ರಂಜಿತ್ ಮನಂಬರಕ್ಕಟ್ ಬಂಡವಾಳ ಹೂಡಿದ್ದಾರೆ.

Be the first to comment