ಡಾ.ರಾಜ್ಕುಮಾರ್ ಸಂಸ್ಥೆಯಲ್ಲಿ ಅನುಭವ ಪಡೆದುಕೊಂಡಿರುವ ವಿಜಯ್ ರಾಜಶೇಖರ್ ’ನನಗೂ ಲವ್ವಾಗಿದೆ’ ಐದನೇ ಸಿನಿಮಾಕ್ಕೆ ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಶೀರ್ಷಿಕೆ ಕೇಳಿದೊಡನೆ ಇದೊಂದು ಲವ್ ಸ್ಟೋರಿ ಇರಬಹುದೆಂಬ ಭಾವನೆ ಬರುತ್ತದೆ. ಬೆಳಗಾಂ ಹುಡುಗ, ಬೆಂಗಳೂರು ಹುಡುಗಿಯ ಪ್ರೇಮ ಕತೆ ಇರಲಿದೆ. ಆದರೆ ಅದಕ್ಕಿಂತಲೂ ಮೀರಿದ ಕುತೂಹಲಕಾರಿ ಸನ್ನಿವೇಶಗಳನ್ನು ನೋಡಬಹುದೆಂದು ಕತೆ ಬರೆದು ನಿರ್ಮಾಣ ಮಾಡುತ್ತಿರುವ ಕೆ.ನೀಲಕಂಠನ್ ಖಳನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ನಿರ್ಮಾಪಕರು ಕಾಳಿ ಅಮ್ಮನ ಭಕ್ತರಾಗಿರುವುದರಿಂದ ಶ್ರೀ ಕಾಳಿ ಅಮ್ಮನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಅಪ್ಪ ಬಂಡವಾಳ ಹೂಡುತ್ತಿರುವ ಸಿನಿಮಾಕ್ಕೆ ಮಗ ಸೋಮವಿಜಯ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ.
ಮಹೂರ್ತ ಸಮಾರಂಭವು ವರ ಮಹಾಲಕ್ಷೀ ಹಬ್ಬದಂದು ಶಾಂತಿನಗರ ರುದ್ರಭೂಮಿ ಆವರಣದಲ್ಲಿರುವ ಶ್ರೀ ಕಾಳಿಕಾಂಬ ಸನ್ನಿದಿಯಲ್ಲಿ ನಡೆಯಿತು. ಪ್ರೇಮಿಗಳು ಎಲ್ಲವನ್ನು ಎದುರಿಸಿ ಕೊನೆಗೆ ಅಮ್ಮನ ಮುಂದೆ, ನಾಯಕ ತಾಳಿ ಕಟ್ಟುವ ದೃಶ್ಯವನ್ನು ಸೆರೆ ಹಿಡಿಯುವುದರೊಂದಿಗೆ ಚಿತ್ರಕ್ಕೆ ಚಾಲನೆ ನೀಡಲಾಯಿತು. ನಂತರ ಸಾಹಸ ದೃಶ್ಯಗಳನ್ನು ಅದೇ ಜಾಗದಲ್ಲಿ ನಡೆಸಿದರು.
ರೋಶಿನಿ ನಾಯಕಿ. ಇವರೊಂದಿಗೆ ಶ್ವೇತಾ, ಅಭಿಷ್ಆಂಟೋನಿ, ಮಮತ, ಬಾಬು, ದೊರೆ, ಕಾರ್ತಿಕ್ ಮುಂತಾದವರು ನಟಿಸುತ್ತಿದ್ದಾರೆ. ಐದು ಹಾಡುಗಳಿಗೆ ಬಿ.ಆರ್.ಹೇಮಂತ್ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.
ಅನುರಾಧಭಟ್, ಶ್ರೀನಿಧಿ,ರಶ್ಮಿ ಮತ್ತು ಸರಿಗಮಪ ಸ್ಪರ್ಧಿಗಳಾದ ಪೋಲೀಸ್ ಸುಬ್ರಮಣ್ಯ, ಕಂಬದರಂಗಯ್ಯ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ನಾಗೇಶ್ಶೆಟ್ಟಿ, ಸಾಹಸ ಸುಪ್ರೀಂಸುಬ್ಬು, ನೃತ್ಯ ಟಿ.ಕೆ.ಸತೀಶ್ ಅವರದಾಗಿದೆ. ಎರಡು ಹಂತಗಳಲ್ಲಿ ಬೆಂಗಳೂರು, ಬೆಳಗಾಂ, ಚಿಕ್ಕಮಗಳೂರು ಹಾಗೂ ಸಕಲೇಶಪುರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ.