ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸುತ್ತಿರುವ ಕಬ್ಜ ಚಿತ್ರದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ವಿಶೇಷ ಪಾತ್ರ ವಹಿಸಲಿದ್ದು, ಅವರ ಫಸ್ಟ್ ಲುಕ್ ಬಿಡುಗಡೆ ಆಗಿದೆ.
ನಿರ್ದೇಶಕ ಚಂದ್ರು ಅವರು ಈ ಬಗ್ಗೆ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಆದರೆ ಅವರು ಸುನೀಲ್ ಪುರಾಣಿಕ್ ಅವರ ಯಾವ ಪಾತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಆರ್ ಚಂದ್ರು ನಿರ್ದೇಶಿಸುತ್ತಿರುವ ಈ ಸಿನೆಮಾ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
80ರ ದಶಕದ ಅಂಡರ್ವರ್ಲ್ಡ್ ಜಗತ್ತಿನ ಬಗ್ಗೆ ಕಬ್ಜ ಸಿನಿಮಾ ಕಥೆ ಹೊಂದಿದೆ. ಈಗಾಗಲೇ ಸಿನೆಮಾದ ಚಿತ್ರೀಕರಣ ಪ್ರಗತಿಯಲ್ಲಿದ್ದು ಬೆಂಗಳೂರಿನಲ್ಲಿ ದುಬಾರಿ ಸೆಟ್ ಹಾಕಲಾಗುತ್ತಿದೆ.
ನಟ ಸುದೀಪ್ ಅವರು ಕಬ್ಜ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಪಾತ್ರ ಇನ್ನಷ್ಟೇ ಅಂತಿಮ ಆಗಬೇಕಿದೆ. ಚಿತ್ರದಲ್ಲಿ ಕಬೀರ್ ದುಹಾನ್ ಸಿಂಗ್, ಕೋಟಾ ಶ್ರೀನಿವಾಸ್, ಡ್ಯಾನಿಶ್ ಅಖ್ತರ್ ಸೈಫಿ, ಅನೂಪ್ ರೇವಣ್ಣ ಅವರು ಪಾತ್ರ ಮಾಡಲಿದ್ದಾರೆ.
ಎಂಟಿಬಿ ನಾಗರಾಜ್ ನಿರ್ಮಾಣ, ಶಿವಕುಮಾರ್ ಕಲಾ ನಿರ್ದೇಶನ, ರವಿ ಬಸ್ರೂರು ಸಂಗೀತ, ಎಜೆ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.
____________

Be the first to comment