ಶಿವಣ್ಣ ಹೊಸ ಚಿತ್ರಕ್ಕೆ ಚಾಲನೆ

ಶಿವರಾಜ್ ಕುಮಾರ್ ನಟನೆಯ 124ನೇ ಚಿತ್ರಕ್ಕೆ ‘ ನೀ ಸಿಗೋವರೆಗೂ’ ಎಂದು ಟೈಟಲ್ ಇಡಲಾಗಿದ್ದು ಚಿತ್ರದ ಮುಹೂರ್ತ ನೆರವೇರಿದೆ.

ರಾಮ್​ ಧುಳಿಪುಡಿ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಎರಡು ಡಿಫರೆಂಟ್​ ಲುಕ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವಕನ ಪಾತ್ರದ ಜೊತೆಗೆ ಆರ್ಮಿ ಅಧಿಕಾರಿಯ ಪಾತ್ರದಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ‘ನೀ ಸಿಗೋವರೆಗೂ’ ಚಿತ್ರದ ಮುಹೂರ್ತ ನೆರವೇರಿದೆ. ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು.
ಶಿವರಾಜ್​ಕುಮಾರ್​ ಪತ್ನಿ ಗೀತಾ ಶಿವರಾಜ್​ಕುಮಾರ್​ ಅವರು ಕ್ಯಾಮೆರಾ ಚಾಲನೆ ಮಾಡಿದರೆ ಮೊದಲ ದೃಶ್ಯಕ್ಕೆ ಕಿಚ್ಚ ಸುದೀಪ್​ ಕ್ಲ್ಯಾಪ್​ ಮಾಡಿದರು.

ಬಾಲ ಶ್ರೀರಾಮ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ತೆಲುಗು, ತಮಿಳು ಚಿತ್ರರಂಗದ ಖ್ಯಾತಿ ನಟಿ ಮೆರ್ಹೀನ್​ ಪೀರ್ಜಾದಾ ಅವರು ‘ನೀ ಸಿಗೋವರೆಗೂ’ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.
ಸಂಗೀತ ನಿರ್ದೇಶಕ ಚರಣ್ ರಾಜ್ ಅವರದ್ದು. ಮಹೇಂದ್ರ ಸಿಂಹ ಛಾಯಾಗ್ರಾಹಣ ಚಿತ್ರಕ್ಕೆ ಇರಲಿದೆ. ಚಿತ್ರವನ್ನು ನಾರಾಲ ಶ್ರೀನಿವಾಸ್ ರೆಡ್ಡಿ, ಸ್ವಾತಿ ವನಪಲ್ಲಿ, ಶ್ರೀಕಾಂತ್ ಧೂಳಿಪುಡಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಶಿವಣ್ಣ ನಟನೆಯ ‘ಭಜರಂಗಿ 2’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಶಿವರಾಜ್​ಕುಮಾರ್​ ಹಲವು ಚಿತ್ರಗಳಲ್ಲಿ ಬ್ಯುಸಿ ಆಗಿದ್ದು ಬೈರಾಗಿ, ವೇದಾ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!