ಕರೋನ ಅಲೆಯ ನಡುವೆಯೂ ಕನ್ನಡದಲ್ಲಿ ಒಂದೊಂದೇ ಚಿತ್ರಗಳು ಬಿಡುಗಡೆ ಆಗುತ್ತಿದ್ದು, ಆ.19ರಂದು ಕನ್ನಡತಿ ಧಾರವಾಜಿ ಖ್ಯಾತಿಯ ಕಿರಣ್ ರಾಜ್, ಸಿಂಗರ್ ಹರ್ಷಾ ನಟಿಸಿರುವ ‘ಜೀವ್ನಾನೇ ನಾಟ್ಕ ಸಾಮಿ’ ಚಿತ್ರ ಬಿಡುಗಡೆ ಆಗುತ್ತಿದೆ.
ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಆಯ್ಕೆಯಾಗಿರುವ ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಹಾಡು, ಟ್ರೇಲರ್ ಮೂಲಕ ಚಿತ್ರ ಸಿನಿಮಾ ಪ್ರಿಯರ ಗಮನ ಸೆಳೆದಿದೆ.
ಕಾಮಿಡಿ, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಒಳಗೊಂಡ ಚಿತ್ರವನ್ನು ರಾಜು ಭಂಡಾರಿ ರಾಜಾವರ್ತ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಕಥೆ -ಚಿತ್ರಕಥೆ – ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಸಿನಿಮಾಗೆ ಲಲಿತಾ ರಾಜಶೇಖರ ಶಿರಹಟ್ಟಿ ಬಂಡವಾಳ ಹೂಡಿದ್ದಾರೆ.
ಆರ್ಯ ಎಂಟರ್ಟೈನ್ಮೆಂಟ್ ಅರ್ಪಿಸುತ್ತಿರುವ ಈ ಚಿತ್ರದಲ್ಲಿ
ಪವಿತ್ರ ಕೋಟ್ಯಾನ್, ಅನಿಕಾ ರಮ್ಯಾ ಅವರು ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಕೊರೋನ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ಸೀಟು ಸಾಮರ್ಥ್ಯದ ನಡುವೆಯೂ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಮನುಷ್ಯನ ಜೀವನಕ್ಕೆ ಸಾಕಷ್ಟು ಹತ್ತಿರವಾದಂತ ಸಿನಿಮಾ ಇದಾಗಿದ್ದು ಸಿನೆಮಾ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಲಿದೆ ಎನ್ನುತ್ತಿದೆ ಚಿತ್ರತಂಡ. ಕರೋನದ ಸಂಕಷ್ಟದ ನಡುವೆಯೂ ಜನರನ್ನು ನಗಿಸುವ ಯತ್ನವನ್ನು ಚಿತ್ರತಂಡ ಮಾಡಿದೆ.
_______________
Be the first to comment