‘ನಿನ್ನ ಸನಿಹಕೆ ‘ ಬಿಡುಗಡೆ ಮುಂದೂಡಿಕೆ

ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಆಗಸ್ಟ್ 20 ರಂದು ಬಿಡುಗಡೆ ಆಗಬೇಕಿದ್ದ ಧನ್ಯಾ ರಾಮ್ ಕುಮಾರ್ ಮತ್ತು ಸೂರಜ್ ಗೌಡ ನಟಿಸಿರುವ ‘ ನಿನ್ನ ಸನಿಹಕೆ ‘ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ.

“ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೈಟ್‌ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಎಂಬ ನಿರ್ಬಂಧ ಇರುವ ಕಾರಣ, ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಬರುವ ನಮ್ಮ ಪ್ರೇಕ್ಷಕರ ಕಾಳಜಿಯನ್ನು ಪರಿಗಣಿಸಿ ಚಿತ್ರದ ಬಿಡುಗಡೆಯನ್ನು ಕೆಲ ದಿನಗಳ ಕಾಲ ಮುಂದಕ್ಕೆ ಹಾಕಲಾಗಿದೆ ” ಎಂದು ಚಿತ್ರತಂಡ ಹೇಳಿದೆ.

ರಾಜಕುಮಾರ್ ಅವರ ಮೊಮ್ಮಗಳು ನಟಿಸಿರುವ ಈ ಚಿತ್ರವನ್ನು ವರಮಹಾಲಕ್ಷ್ಮಿ ಹಬ್ಬದ ದಿನವಾದ ಆಗಸ್ಟ್ 20 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಸೀಟು ಸಾಮರ್ಥ್ಯ ಇರುವ ಜೊತೆಗೆ ನೈಟ್ ಕರ್ಫ್ಯೂ ಇರುವ ಕಾರಣ ಬಿಡುಗಡೆ ದಿನಾಂಕವನ್ನು ಮುಂದೂಡಲು ಚಿತ್ರತಂಡ ನಿರ್ಧರಿಸಿದೆ.

ರಾಜ್ಯದಾದ್ಯಂತ ರಾತ್ರಿ 9 ಗಂಟೆಯಿಂದ ನೈಟ್‌ ಕರ್ಫ್ಯೂ ಜಾರಿಯಲ್ಲಿರುವುದರಿಂದ ನೈಟ್ ಶೋ ನಡೆಯುತ್ತಿಲ್ಲ. ಇದರಿಂದ ಚಿತ್ರಗಳಿಗೆ ಆದಾಯ ಗಳಿಕೆಯಲ್ಲಿ ಹಿನ್ನಡೆ ಉಂಟಾಗುತ್ತಿದೆ. ಹೀಗಾಗಿ ಹೊಸ ಸಿನಿಮಾಗಳು ಬಿಡುಗಡೆಗೆ ಹಿಂದೇಟು ಹಾಕುತ್ತಿವೆ.

ಸರಕಾರ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ಶೇ.100 ಸಾಮರ್ಥ್ಯದಲ್ಲಿ ಚಿತ್ರ ಪ್ರದರ್ಶನ ಮಾಡಲು ಅವಕಾಶ ನೀಡುತ್ತಿಲ್ಲ. ಇದರಿಂದ ಸ್ಟಾರ್ ನಟರ ಚಿತ್ರಗಳು ಸೇರಿದಂತೆ ಸಣ್ಣ ಬಜೆಟ್ ನ ಚಿತ್ರಗಳು ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಹಿಂದೇಟು ಹಾಕುತ್ತಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!