ಕನ್ನಡದಲ್ಲಿ 2018ರಲ್ಲಿ ಬಿಡುಗಡೆಯಾದ ‘ಸಂಕಷ್ಟಕರ ಗಣಪತಿ’ ಚಿತ್ರ ಹಿಂದಿ ಭಾಷೆಯಲ್ಲಿ ರಿಮೇಕ್ ಆಗುತ್ತಿದೆ.
ಅರ್ಜುನ್ ಕುಮಾರ್ ನಿರ್ದೇಶನದ ಈ ಚಿತ್ರ ನಾಯಕನಿಗೆ ಕೈ ಹೇಗೆಲ್ಲಾ ತೊಂದರೆ ಕೊಡುತ್ತದೆ ಎನ್ನುವುದನ್ನು ನಿರೂಪಣೆ ಮಾಡಿತ್ತು. ಚಿತ್ರದಲ್ಲಿ ಲಿಖಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದರು.
“ಸಂಕಷ್ಟಕರ ಗಣಪತಿ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಕರ್ವಾನ್, ರಶ್ಮಿ ರಾಕೆಟ್ ಸಿನಿಮಾ ಖ್ಯಾತಿಯ ನಿರ್ಮಾಪಕ ಆಕಾರ್ಶ್ ಖುರಾನ ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೆ. ಚಿತ್ರಕ್ಕೆ ಬಾಯಿನ್ ಹಾಥ್ ಕಾ ಖೇಲ್ ಎನ್ನುವ ಹೆಸರು ಇಡಲಾಗಿದೆ. ಆಕರ್ಶ್ ಖುರಾನ, ಸನ್ನಿ ಖನ್ನಾ, ವಿಕಾಸ್ ಶರ್ಮಾ ನಿರ್ಮಾಣ ಮಾಡುತ್ತಿದ್ದಾರೆ” ಎಂದು ಅರ್ಜುನ್ ಕುಮಾರ್ ಹೇಳಿದ್ದಾರೆ.
ಈಗಾಗಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಇನ್ನೂ ಬಹಿರಂಗ ಆಗಿಲ್ಲ.
ಸಂಕಷ್ಟಕರ ಗಣಪತಿ ಚಿತ್ರದಲ್ಲಿ ಲಿಖಿತ್ ಶೆಟ್ಟಿಗೆ ನಾಯಕಿಯಾಗಿ ಶ್ರುತಿ ಗೊರಾಡಿಯಾ ಕಾಣಿಸಿಕೊಂಡಿದ್ದರು. ಇಲ್ಲಿ ನಾಗಭೂಷಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕನ್ನಡದಲ್ಲಿ ಯಶಸ್ವಿಯಾದ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯನ್ನುಂಟು ಮಾಡಿದೆ.
__________

Be the first to comment