ಸ್ವಾತಂತ್ರ್ಯ ಸಂಗ್ರಾಮದ ಕಥೆ ಹೇಳುವ “ರತ್ನಾಪುರ’

ಸ್ವಾತಂತ್ರ್ಯ  ಸಂಗ್ರಾಮದ ಭಾಗವಾಗಿ 1942 ನಲ್ಲಿ ನಡೆದ ರತ್ನಾಪುರದ ಇತಿಹಾಸವನ್ನು ಒಳಗೊಂಡ ‘ರತ್ನಾಪುರ’ ಚಿತ್ರದ ಚಿತ್ರೀಕರಣ ಬೆಳಗಾವಿಯ ಸಪ್ತಸಾಗರ‌ ಬಣದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.

ಲೋಕೂರ್ ಕ್ರಿಯೇಶನ್ಸ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಚಿತ್ರದ ಮೂಲಕ ಹೊಸ ಯುವಕರ ತಂಡ ನೈಜ ಘಟನೆ ಆಧಾರಿತ ಸಿನಿಮಾ‌ದ ತಯಾರಿಯಲ್ಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಈ ಸಿನಿಮಾಕ್ಕೆ ತಾಯಿ ಮತ್ತು ಮಗುವಿನ ನಡುವೆ ನಡೆದಿರುವ ಘಟನೆ ಪ್ರೇರಣೆ ಎನ್ನಲಾಗಿದೆ.
‘ಕಲಾಗಂಗೋತ್ರಿ’ ನಾಟಕ ತಂಡದಲ್ಲಿ ನಾಟಕಗಳನ್ನು ಮಾಡಿದ ತಂಡ ಈ ಸಿನಿಮಾ‌ ಮಾಡುತ್ತಿರುವುದು ವಿಶೇಷ. ರಂಗಭೂಮಿ ಹಿನ್ನೆಲೆಯ ತಂಡ ಇದಾಗಿದ್ದು ಸಾಕಷ್ಟು ಭರವಸೆ ಮೂಡಿಸಿದೆ.

ನಿರ್ದೇಶಕ ಹಾಲೇಶ ಲೋಕುರ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಇದರ ಜೊತೆಗೆ  ರತ್ನಾಪುರ ಸಿನಿಮಾದಲ್ಲಿ ಹಾಲೇಶ ಕೂಡ ನಟಿಸುತ್ತಿದ್ದಾರೆ. ಮರಾಠಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಮಾಧುರಿ ಪವಾರ್ ಪ್ರಮುಖ ಪಾತ್ರದಲ್ಲಿ ಇದ್ದಾರೆ.

ಲೋಕೂರ್ ಕ್ರಿಯೇಷನ್ಸ್ ಜೊತೆಗೆ ಶಿವಬಸು ನಾಯ್ಕ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇವರಿಗೆ ಎಂ ಸೋಮನಾಥ್ ಸಾಥ್ ನೀಡಿದ್ದಾರೆ.
ಮರಾಠಿ ಸಿನಿಮಾ ‘ಸೈರಾಟ್’ ನ ಅಜಯ್ ಅತುಲ್ ಮತ್ತು ಕ್ಲಾರೆನ್ಸ್ ಈ ಸಿನಿಮಾದ ಸಂಗೀತ ನಿರ್ದೇಶಕರಾಗಿದ್ದು, ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ. ಛಾಯಾಗ್ರಹಣ ವಿನಯ ಗೌಡ ಅವರದ್ದು. ಸಹ ನಿರ್ದೇಶಕರಾಗಿ ಅಜೀತ್, ಸುನೀಲ್, ಬಸವರಾಜ್ ಕೆಲಸ ಮಾಡುತ್ತಿದ್ದಾರೆ. ಅನಿಲ್ ಕಲಾ ನಿರ್ದೇಶಕರಾಗಿದ್ದಾರೆ.

ಚಿತ್ರದಲ್ಲಿ ದಶರಥ ಅಂಬಿ ನಾಯ್ಕ್, ಶಿವಬಸು, ಸುನೀಲ್, ಕುಮಾರಿ ಕೋಮಲ, ಮುರುಗೇಶ್ ಭಾಸಿಂಗಿ, ಸುರೇಶ್ ರೆಡ್ಡಿ, ಸಖಾರಾಮ್, ಸೋಮು ಹಾಗೂ ಕಲಾಗಂಗೋತ್ರಿ ನಾಟಕ ತಂಡದ ಬಳಗದ ಕಲಾವಿದರು ನಟಿಸುತ್ತಿದ್ದಾರೆ.
ವಿಶೇಷ ಅತಿಥಿ ಪಾತ್ರದಲ್ಲಿ ವಿಠ್ಠಲ ನಿಂಗಪಾ ಪುಜಾರಿ (ವರದಿಗಾರರು ), ಡಾ.ಶಿವಬಸವ ನಾಯಕ, ಸೋಮನಾಥ ಅವರು ಕಾಣಿಸಿಕೊಳ್ಳಲಿದ್ದಾರೆ.ಜೊತೆಗೆ ಚಿತ್ರತಂಡಕ್ಕೆ ಮಾರ್ಗದರ್ಶಕರಾಗಿ ಶಿವಶಂಕರ್ ನಾಯಕ್ ರವರು ಇರುತ್ತಾರೆ.

ಚಿತ್ರ ಪೋಸ್ಟರ್ ಡಿಸೈನ್ ಅನ್ನು ಸಮೇದ್ ನಾಡಗೌಡ ಅವರು ವಹಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!