ಪ್ರೇಮ್ ಹೊಸ ಸಿನೆಮಾದ ಹೀರೋ ಬಗ್ಗೆ ಚರ್ಚೆ

ನಿರ್ದೇಶಕ ಪ್ರೇಮ್ ಹೊಸ ಸಿನೆಮಾದ ಸ್ಕ್ರಿಪ್ಟ್ ಮುಗಿಸಿದ್ದು ಸಿನಿಮಾದ ಬಗ್ಗೆ ಈ ತಿಂಗಳು ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಹೊಸ ಚಿತ್ರದಲ್ಲಿ ಯಾರು ನಾಯಕ ನಟನಾಗಿ ಅಭಿನಯಿಸಲಿದ್ದಾರೆ ಎನ್ನುವ ಬಗ್ಗೆ ಸಿನೆಮಾ ಪ್ರೇಮಿಗಳಲ್ಲಿ ಕುತೂಹಲ ಮೂಡಿದೆ.

ಪ್ರೇಮ್ ನಿರ್ದೇಶನ ಮಾಡಲಿರುವ 9ನೇ ಚಿತ್ರ ಆಕ್ಷನ್ ಓರಿಯಂಟ್ ಆಗಿರಲಿದೆ. ದೊಡ್ಡ ಸ್ಟಾರ್ ನಟರು ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಒಂದು ಕಡೆ ಸುದೀಪ್ ಜೊತೆಗೆ ಪ್ರೇಮ್ ಸಿನೆಮಾ ಮಾಡಲಿದ್ದಾರೆ ಎನ್ನುವ ಊಹೆ ಹರಿದಾಡುತ್ತಿದೆ. ಇನ್ನೊಂದೆಡೆ ದರ್ಶನ್ ಜೊತೆ ಸಿನಿಮಾವನ್ನು ಪ್ರೇಮ್ ಘೋಷಣೆ ಮಾಡಬಹುದೇ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ಜೊತೆಗೆ ಧ್ರುವ ಸರ್ಜಾ ಅವರನ್ನು ಹಾಕಿಕೊಂಡು ಸಿನೆಮಾ ಮಾಡಬಹುದು ಎಂದು ಅಂದಾಜು ಮಾಡಲಾಗುತ್ತಿದೆ.

ಆಗಸ್ಟ್ 24 ರಂದು ಹೊಸ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರೇಮ್ ಅಧಿಕೃತವಾಗಿ ಮಾಹಿತಿ ಹೇಳಲಿದ್ದಾರೆ ಎನ್ನಲಾಗಿದೆ. ಅಲ್ಲಿಯವರೆಗೆ ಸಿನೆಮಾ ಪ್ರೇಮಿಗಳು ಕಾಯಬೇಕಿದೆ.

ಪ್ರೇಮ್ ನಿರ್ದೇಶಿಸಿರುವ ಏಕ್ ಲವ್ ಯಾ ಬಿಡುಗಡೆಗೆ ಸಿದ್ಧ ಆಗಿದೆ. ಚಿತ್ರವನ್ನು ರಕ್ಷಿತಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ಇದೆ.
ರಕ್ಷಿತಾ ಅವರ ಸಹೋದರ ರಾಣ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು ರಚಿತಾ ರಾಮ್ ಮತ್ತು ರೀಶ್ಮಾ ನಾಯಕಿಯಾಗಿ ನಟಿಸಿದ್ದಾರೆ.
__________

Be the first to comment

Leave a Reply

Your email address will not be published. Required fields are marked *

Translate »
error: Content is protected !!