ಕೃಷಿ ಕೆಲಸ ಮಾಡಿದ ಅದಿತಿಗೆ ಮೆಚ್ಚುಗೆಯ ಮಹಾಪೂರ

ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಅವರು ತಮ್ಮ ಹಳ್ಳಿಯ ಹೊಲದಲ್ಲಿ ಕೆಲಸ ಮಾಡುತ್ತಿರುವ ವಿಡಿಯೋಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೃಷಿ ಕುಟುಂಬದಿಂದ ಬಂದಿರುವ ಅದಿತಿ ತಮ್ಮ ಸಿನಿಮಾ ಕೆಲಸದ ನಡುವೆ ದಾವಣಗೆರೆಯ ತಮ್ಮ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದು ಈ ವಿಡಿಯೋವನ್ನು ಯೂ ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅವರು ಟ್ರಾಕ್ಟರ್ ಏರಿ ಬಿತ್ತನೆ ಮಾಡಿದ್ದು ಅದರ ಜೊತೆಗೆ ನೇಗಿಲು ಹಿಡಿದು ಉಳುಮೆ ಮಾಡಿದ್ದಾರೆ. ಸಗಣಿ ಬಾಚಿ, ಕೊಟ್ಟಿಗೆ ಗುಡಿಸುವ ಜೊತೆಗೆ ಹಾಲು ಕರೆದು ಕುಡಿದಿದ್ದಾರೆ. ಕಟ್ಟಿಗೆ ಒಲೆಯಲ್ಲಿ ರೊಟ್ಟಿ ಮಾಡಿ ತಿಂದು ಸಂಭ್ರಮಿಸಿದ ವಿಡಿಯೋ ಸಹ ಇಲ್ಲಿದೆ.👇

ವಿಡಿಯೋದಲ್ಲಿ ಅದಿತಿ, ” ಅದೆಷ್ಟೋ ಬಾರಿ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೂ, ಮೈತುಬಾ ಸಾಲವಿದ್ದರೂ ಪ್ರತಿನಿತ್ಯ ಕಷ್ಟಪಟ್ಟು ಕೆಲಸ ಮಾಡಿ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವ ದೇವರು ಅನ್ನಬ್ರಹ್ಮ ರೈತನಿಗೆ ಈ ಮೂಲಕ ನಮನ. ಈ ವಿಡಿಯೋ ಪ್ರತಿಯೊಬ್ಬ ರೈತ ಮಿತ್ರರಿಗೆ ಸಮರ್ಪಣೆ” ಎಂದು ಬರೆದಿದ್ದು ರೈತರ ಮನ ಗೆದ್ದಿದ್ದಾರೆ.

ಎರಡು ವಿಡಿಯೋ ಮೂಲಕ ಅದಿತಿ ತಮ್ಮ ಕೃಷಿ, ಹಳ್ಳಿ ಬದುಕನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

” ನೀವು ನಮ್ಮ ಮನಸನ್ನು ಗೆದ್ದಿರಿ” ಎಂದು ಮೂರ್ತಿ ಎನ್ನುವವರು ಹೇಳಿದ್ದಾರೆ.
ಇನ್ನೂ ಒಂದಷ್ಟು ಅಭಿಮಾನಿಗಳು ” ಸೂಪರ್ ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊದಲಿಗೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಬಳಿಕ ಸಿನೆಮಾಗೆ ಬಂದರು. ಈಗ ಅವರು ಕನ್ನಡದ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!