ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾದ ಪೋಸ್ಟರ್ ಸಾಕಷ್ಟು ಸದ್ದು ಮಾಡುತ್ತಿದೆ.
ಶಿವಣ್ಣ ಅವರ ಹುಲಿ ವೇಷದ ಗೆಟಪ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಆಟೋ, ಕಾರುಗಳ ಮೇಲೆ ಪೋಸ್ಟರ್ ರಾರಾಜಿಸುತ್ತಿವೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.
‘ಟಗರು ‘ ಚಿತ್ರದ ಬಳಿಕ ಶಿವರಾಜ್ ಕುಮಾರ್ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಂಜಲಿ ನಾಯಕಿಯಾಗಿ ನಟಿಸಿದ್ದಾರೆ. ಪೃಥ್ವಿ ಅಂಬರ್, ಯಶೋ ಶಿವಕುಮಾರ್, ಉಮಾಶ್ರೀ, ಶಶಿಕುಮಾರ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದ್ದು ಚಿತ್ರ ತಯಾರಕರು ನಾಯಕನ ಪಾತ್ರದ ಪರಿಚಯ ಮಾಡಲು ಬೃಹತ್ ಸೆಟ್ ನಿರ್ಮಿಸಲು ಯೋಜನೆ ಹಾಕಿದ್ದಾರೆ.
ಆಗಸ್ಟ್ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣವನ್ನು ಮುಗಿಸಲು ಚಿತ್ರತಂಡ ನಿರ್ಧರಿಸಿದೆ.
ವಿಜಯ್ ಮಿಲ್ಟನ್ ಚಿತ್ರ ನಿರ್ದೇಶನ ಮಾಡಿದ್ದು ಕೃಷ್ಣ ಸಾರ್ಥಕ್ ನಿರ್ಮಾಣವನ್ನು ಬೈರಾಗಿ ಸಿನಿಮಾ ಹೊಂದಿದೆ.
___________

Be the first to comment