ಕಲೆಯ ಸೆಳೆತವೇ ಹಾಗೆ… ಪ್ರತಿಭಾವಂತರು ಎಲ್ಲೇ ಇದ್ದರೂ ತನ್ನ ಮಾಯಲೋಕದೊಳಗೆ ಸಂಚಾರ ಮಾಡಲು ಆಮಂತ್ರಿಸುತ್ತದೆ, ಅದು ಕಿರುತೆರೆ ಇರಲಿ, ಬೆಳ್ಳಿತೆರೆಯಲ್ಲೂ ಮಿಂಚುವಂತೆ ಮಾಡುತ್ತದೆ. ಈಗ ಅದೇ ಸಾಲಿಗೆ ಸೇರಲು ಹೊರಟಿರುವ ಎನ್‍ಆರ್‍ಐ ಕನ್ನಡಿಗ, ಯುವ ಪ್ರತಿಭೆಯ ಹೆಸರು ರವಿ ಶಿರೂರ್. ಈ ಹೆಸರು ವಾರದ ಹಿಂದೆ ಎಲ್ಲೋ ಕೇಳಿದ್ದೇವೆ ಎಂದುಕೊಂಡರೆ ನಿಮ್ಮ ಊಹೆ ಸರಿ. ಇವರು ಇತ್ತೀಚೆಗಷ್ಟೇ ಬಿಡುಗಡೆಯಾದ ಸಮರ್ಥ ಚಿತ್ರದಲ್ಲಿ ತಮ್ಮ ನಟನೆಯ ಸಾಮಥ್ರ್ಯವನ್ನು ತೋರಿಸಿದ ಯುವ ನಟ.
ಒಂದು ಚಿಕ್ಕ ಗ್ರಾಮದಲ್ಲಿ ಜನಿಸಿ ಉನ್ನತ ವಿದ್ಯಾಭ್ಯಾಸ ಮಾಡಿ ಆಸ್ಟ್ರೇಲಿಯಾ ಎಂಬ ಮಹಾನಗರದಲ್ಲಿ ದೊಡ್ಡ ಪಗಾರ(ಸಂಬಳ) ದಲ್ಲಿದ್ದರೂ ಕೂಡ ಅವರನ್ನು ಯಾವಾಗ ಕಲೆ ಕೈ ಬೀಸಿ ಕರೆಯಿತೋ ಚಂದನವನ ಎಂಬ ಮಾಯಾಲೋಕಕ್ಕೆ ಎಂಟ್ರಿ ಕೊಟ್ಟು ಬಿಟ್ಟರು. ಆಕಸ್ಮಿಕವಾಗಿ ಚಂದನವನಕ್ಕೆ ಧುಮುಕಿದ ರವಿಶಿರೂರ್ ಅದೃಷ್ಟ ಬಾಗಿಲನ್ನು ತಟ್ಟಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‍ನಲ್ಲಿ 8 ವರ್ಷಗಳಿಂದ ಹಲವಾರು ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡದ ಹಿರಿಮೆಯನ್ನು ಮೆರೆದಿದ್ದರು.
ನವೆಂಬರ್ ತಿಂಗಳು ಬಂತೆಂದರೆ ಆಸ್ಟ್ರೇಲಿಯಾದಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ರಾಜ್ಯೋತ್ಸವವನ್ನು ಬಲು ಅದ್ಧೂರಿಯಾಗಿ ಆಚರಿಸುವ ರವಿ ಆ ತಿಂಗಳಲ್ಲಿ ಮೂರು ಬಾರಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕನ್ನಡ ಸಂಘಟನೆಗಳಿಗೆ ಭದ್ರ ಬುನಾದಿಯನ್ನು ಹಾಕಿದ್ದಾರೆ. ಕಾರ್ಯಕ್ರಮವೊಂದಕ್ಕೆ ಸಂಗೀತ ನಿರ್ದೇಶಕ ಅಭಿಮಾನ್‍ರಾಯ್ ಅವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿದ್ದಾಗ ಕನ್ನಡ ಚಿತ್ರರಂಗದ ಬಗ್ಗೆ ಸಾಕಷ್ಟು ವಿಷಯಗಳನ್ನು ಕಲೆ ಹಾಕಿರುವ ರವಿಗೆ ಆಗಲೇ ಕನ್ನಡದಲ್ಲಿ ಒಂದು ಚಿತ್ರದಲ್ಲಿ ನಟಿಸಬೇಕೆಂಬ ಬಯಕೆಯಾಯಿತಂತೆ. ಅದರ ಪರಿಣಾಮವೇ ಸಮರ್ಥ ಚಿತ್ರ.
ರವಿ ಶಿರೂರ್‍ಗೆ ಸ್ಯಾಂಡಲ್‍ವುಡ್‍ನ ಸಾಹಸಸಿಂಹ ವಿಷ್ಣುವರ್ಧನ್ ಎಂದರೆ ಪಂಚಪ್ರಾಣವಂತೆ. ಅವರ ಮೇಲಿನ ಅಭಿನಯದಿಂದಲೇ ಅವರ ತೋಳಿನ ಮೇಲೆ ಸಿಂಹದ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರಂತೆ. ತಾವು ನಟಿಸಿರುವ ಸಮರ್ಥ ಎಂಬ ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದಿಂದ ಜನರ ಮನಸ್ಸನ್ನು ಕದ್ದಿದ್ದಾರೆ. ಸಮರ್ಥ ಚಿತ್ರವನ್ನು ಎಸ್.ಜಿ.ಆರ್. ಪಾವಗಡ ನಿರ್ದೇಶನ ಮಾಡಿದರು. ತಮ್ಮ ಮೊದಲ ಚಿತ್ರದಲ್ಲಿ ಚಿತ್ರರಂಗದ ಮೆಟ್ಟಿಲನ್ನು ಯಶಸ್ವಿಯಾಗಿ ಹತ್ತಿರುವ ರವಿಗೆ ಈಗ ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬಂದಿದೆಯಂತೆ.
ವಿಷ್ಣು ನಟಿಸಿದ ಸಾಹಸಮಯ ಚಿತ್ರಗಳೆಂದರೆ ಬಲು ಇಷ್ಟ ಎಂದು ಹೇಳುವ ರವಿಗೆ ಮುಂದೊಂದು ದಿನ ತಾನು ಕೂಡ ಆ್ಯಕ್ಷನ್ ಸಿನಿಮಾಗಳಲ್ಲಿ ನಟಿಸಬೇಕೆಂಬ ಇಂಗಿತವನ್ನು ಹೊಂದಿದ್ದಾರೆ. ಈ ಯುವ ಪ್ರತಿಭೆ ಸ್ಯಾಂಡಲ್‍ವುಡ್‍ನಲ್ಲಿ ದೊಡ್ಡ ನಟನಾಗಿ ಮೆರೆಯುವಂತಾಗಲಿ ಎಂಬುದೇ ಸಿನಿಸುದ್ದಿಯ ಆಶಯ
Pingback: CI-CD Solutions