ನೀಲಿ ಚಿತ್ರ ನಿರ್ಮಾಣದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಉದ್ಯಮಿ ರಾಜ್ ಕುಂದ್ರಾ ಜೊತೆ ಪತ್ನಿ ಶಿಲ್ಪಾ ಶೆಟ್ಟಿ ಭಾಗಿ ಆಗಿರುವ ಬಗ್ಗೆ ಪೊಲೀಸರು ಮಹತ್ವದ ತನಿಖೆ ಕೈಗೊಂಡಿದ್ದಾರೆ.
ಮುಂಬೈನ ಜುಹುನಲ್ಲಿರುವ ಶಿಲ್ಪಾ ಶೆಟ್ಟಿ ಬಂಗಲೆ ಮೇಲೆ ಅಪರಾಧ ವಿಭಾಗದ ಪೊಲೀಸರ ತಂಡ ದಾಳಿ ನಡೆಸಿ ಶಿಲ್ಪಾ ಶೆಟ್ಟಿ ಅವರಿಂದ ಹೇಳಿಕೆ ಪಡೆದುಕೊಂಡಿದೆ. ರಾಜ್ ಕುಂದ್ರಾ ಅವರ ವಿಯಾನ್ ಕಂಪನೆಯ ನಿರ್ದೇಶಕರಲ್ಲಿ ಶಿಲ್ಪಾ ಶೆಟ್ಟಿ ಒಬ್ಬರಾಗಿದ್ದು ವಿಚಾರಣೆ ಮಹತ್ವ ಪಡೆದಿದೆ.
ಕುಂದ್ರಾ ಒಡೆತನದ ಮುಂಬೈನ ಅಂಧೇರಿ ವೆಸ್ಟ್ ನಲ್ಲಿರುವ ಕಂಪೆನಿ ಮೇಲೆ ಪೊಲೀಸರು ದಾಳಿ ನಡೆಸಿ ಅಶ್ಲೀಲ ಚಿತ್ರಗಳ ಡೇಟಾ ವಶಕ್ಕೆ ಪಡೆಸಿಕೊಂಡಿದ್ದಾರೆ. ದಾಳಿ ವೇಳೆ 100ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಸಿಕ್ಕಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಮೊಬೈಲ್ ಅಪ್ಲಿಕೇಷನ್ ಗಳ ಮೂಲಕ ಪ್ರಸಾರ ಮಾಡುತ್ತಿದ್ದ ಆರೋಪದಲ್ಲಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಜುಲೈ 19ರಂದು ಬಂಧಿಸಿದ್ದರು. ಪೊಲೀಸ್ ಕಸ್ಟಡಿ ಅವಧಿಯನ್ನು ಜುಲೈ 27ರ ವರೆಗೂ ವಿಸ್ತರಣೆ ಮಾಡಲಾಗಿದೆ.
ಹಲವಾರು ನಟಿಯರು ರಾಜ್ ಕುಂದ್ರಾ ಅವರು ತಮಗೆ ಬೆತ್ತಲೆ ಆಗಿ ನಟನೆ ಮಾಡುವಂತೆ ಕೋರಿದ್ದರು ಎಂದು ಆರೋಪ ಮಾಡಿದ್ದಾರೆ. ಪೊಲೀಸರ ವಿಚಾರಣೆಯಿಂದ ಇನ್ನಷ್ಟು ಮಾಹಿತಿ ಹೊರ ಬರುವ ನಿರೀಕ್ಷೆ ಇದೆ.
Be the first to comment