ಶೂಟಿಂಗ್ ಗೆ ಮರಳಿದ ಮೇಘನಾ ರಾಜ್

ನಟಿ ಮೇಘನಾ ರಾಜ್ ಮತ್ತೆ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದು ಅಭಿಮಾನಿಗಳಿಂದ ಶುಭ ಹಾರೈಕೆ ವ್ಯಕ್ತವಾಗಿದೆ.

ಜೂ. ಚಿರು ಜನಿಸಿ 9 ತಿಂಗಳು ತುಂಬಿದ್ದು ಚಿತ್ರೀಕರಣಕ್ಕೆ ಮರಳಿರುವ ಸುದ್ದಿಯನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರೀಕರಣ ಸೆಟ್‌ನಲ್ಲಿ ಮೇಘನಾ ರಾಜ್ ಕೈಯಲ್ಲಿ ಸ್ಕ್ರಿಪ್ಟ್ ಹಿಡಿದು ಡೈಲಾಗ್ ಓದುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

“ಜೂ. ಚಿರುಗೆ 9 ತಿಂಗಳು ತುಂಬಿದೆ. ವರ್ಷದ ನಂತರ ಚಿತ್ರೀಕರಣಕ್ಕೆ ಹಾಜರಾಗುವ ಮೂಲಕ ಸಂಭ್ರಮಿಸುತ್ತಿದ್ದೇನೆ” ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ.

ಶೂಟಿಂಗ್ ನಲ್ಲಿ ಮತ್ತೆ ಭಾಗಿ ಆಗಿರುವ ಬಗ್ಗೆ ಅನೇಕರು ಶುಭ ಹಾರೈಸಿದ್ದಾರೆ. ಮಲಯಾಳಂ ನಟಿ ನಜ್ರಿಯಾ, ನಿರ್ದೇಶಕ ಸಿಂಪಲ್ ಸುನಿ, ನಟಿ ಸಂಯುಕ್ತ ಹೊರನಾಡ್ ಅಭಿನಂದನೆ ಸಲ್ಲಿಸಿದ್ದಾರೆ.

ಮೇಘನಾ ರಾಜ್ ಯಾವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.

ಸುಮಾರು ಒಂದೂವರೆ ವರ್ಷದ ಬಳಿಕ ಮೇಘನಾ ರಾಜ್ ನಟನೆಯತ್ತ ಮುಖ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!