ಸೆ.24ಕ್ಕೆ ‘ ಬಡವ ರಾಸ್ಕಲ್ ” ರಿಲೀಸ್

ನಟ ಧನಂಜಯ್ ಹೀರೋ ಆಗಿರುವ ‘ಬಡವ ರಾಸ್ಕಲ್’ ಚಿತ್ರ ಸೆಪ್ಟೆಂಬರ್ 24ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿರುವ ಧನಂಜಯ್, ” ಮಿಡಲ್ ಕ್ಲಾಸ್ ಗ್ಯಾಂಗ್ ಸ್ಟರ್ ಆಗಿ “ಬಡವ ರಾಸ್ಕಲ್ ” ಚಿತ್ರದ ಮೂಲಕ ಸೆಪ್ಟೆಂಬರ್ 24ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬರಲಿದ್ದೇನೆ ” ಎಂದು ಹೇಳಿದ್ದಾರೆ.
ಈ ಚಿತ್ರ ಮಧ್ಯಮ ವರ್ಗದ ಹುಡುಗನ ಕಥೆ ಹೊಂದಿದೆ. ಚಿತ್ರಕ್ಕೆ ಶಂಕರ್ ಗುರು ನಿರ್ದೇಶನ ಇದೆ. ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅಮೃತಾ ಮತ್ತು ಧನಂಜಯ್ ಎರಡನೇ ಬಾರಿಗೆ ತೆರೆ ಹಂಚಿಕೊಂಡಿದ್ದು ಈ ಮೊದಲು ‘ಪೋಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಒಟ್ಟಿಗೆ ಮಿಂಚಿದ್ದರು.
ಕರೋನ ಬಳಿಕ ರಾಜ್ಯದಲ್ಲಿ ಚಿತ್ರಮಂದಿರ ಓಪನ್ ಆಗಿದ್ದು ಒಂದೊಂದೇ ಚಿತ್ರಗಳು ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತಿವೆ. ಈಗಾಗಲೇ ಸಲಗ, ಭಜರಂಗಿ-2 ಚಿತ್ರಗಳು ಬಿಡುಗಡೆ ದಿನಾಂಕ ಘೋಷಣೆ ಮಾಡಿವೆ.

ಸುದೀಪ್ ನಟನೆಯ ಕೋಟಿಗೊಬ್ಬ 3, ಯಶ್ ಅಭಿನಯದ ಕೆಜಿಎಫ್ 2 ಚಿತ್ರಗಳು ಶೀಘ್ರವೇ ರಿಲೀಸ್ ಡೇಟ್ ಘೋಷಣೆ ಮಾಡುವ ನಿರೀಕ್ಷೆ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಹೊಂದಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!