ಸೆ.10ರಂದು ಭಜರಂಗಿ-2′ ಬಿಡುಗಡೆ

ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ-2’ ಸಿನಿಮಾ ಸೆಪ್ಟಂಬರ್ 10ರಂದು ಬಿಡುಗಡೆಯಾಗಲಿದೆ. ಲಾಕ್ ಡೌನ್ ಬಳಿಕ ‘ಭಜರಂಗಿ-2’ ತಂಡ ಸಿನೆಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಮೊದಲ ಚಿತ್ರ ತಂಡ ಆಗಿದೆ. ಇದು ಶಿವಣ್ಣ ಅಭಿಮಾನಿಗಳಲ್ಲಿ ಹರ್ಷ ಉಂಟು ಮಾಡಿದೆ.

ಸೆಪ್ಟಂಬರ್ 10 ಗಣೇಶ ಹಬ್ಬ ಆಗಿದ್ದು ಗಣೇಶ ಚತುರ್ಥಿ ದಿನವೇ ಭಜರಂಗಿ-2 ಸಿನಿಮಾ ಬಿಡುಗಡೆಯಾಗುತ್ತಿರುವುದು ಸಂಭ್ರಮವನ್ನು ಹೆಚ್ಚಿಸಿದೆ. ‘ಭಜರಂಗಿ-2’ ಸಿನಿಮಾ ಚಿತ್ರೀಕರಣ ಮುಗಿದು ಒಂದು ವರ್ಷದ ದಾಟಿದೆ. ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗುತ್ತಾ ಹೋಯಿತು.

ಜಯಣ್ಣ ಫಿಲ್ಮ್ಸ್ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದ್ದು ಹರ್ಷ ನಿರ್ದೇಶನ ಇದೆ. ಶಿವಣ್ಣಗೆ ನಾಯಕಿಯಾಗಿ ಭಾವನ ಮೆನನ್ ಕಾಣಿಸಿಕೊಂಡಿದ್ದಾರೆ. ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ನಲ್ಲಿ ಭಜರಂಗಿ ಮತ್ತು ವಜ್ರಕಾಯ ಸಿನಿಮಾ ಬಳಿಕ ಭಜರಂಗಿ 2 ಚಿತ್ರ ತೆರೆಯ ಮೇಲೆ ಬರಲು ಸಿದ್ಧ ಆಗಿದ್ದು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!