ಇಂದಿನಿಂದ ರಾಜ್ಯದಲ್ಲಿ ಚಿತ್ರ ಮಂದಿರ ಓಪನ್

ರಾಜ್ಯಾದ್ಯಂತ ಇಂದಿನಿಂದ ಚಿತ್ರಮಂದಿರಗಳು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರಿಂದ ಚಿತ್ರೋದ್ಯಮದ ಚಟುವಟಿಕೆಗಳು ಇನ್ನಷ್ಟು ಗರಿಗೆದರಿದ ಸಾಧ್ಯತೆ ಇದೆ.

50% ಸೀಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲು ಸರಕಾರ ಒಪ್ಪಿಗೆ ಸೂಚಿಸಿದೆ. ರಾಜ್ಯದ ಎಲ್ಲಾ ಮಲ್ಟಿಫ್ಲೆಕ್ಸ್‌ಗಳಿಗೂ ಇದೇ ನಿಯಮ ಅನ್ವಯವಾಗಲಿದೆ. ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯವಾಗಿದೆ.

ಕರೋನ ಹಿನ್ನೆಲೆಯಲ್ಲಿ ಏಪ್ರಿಲ್ 20 ರಿಂದ ರಾಜ್ಯದ ಎಲ್ಲ ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಈಗ ಸುಮಾರು ಮೂರು ತಿಂಗಳ ನಂತರ ಚಿತ್ರಮಂದಿರ ತೆರೆಯುತ್ತಿರುವುದು ಪ್ರೇಕ್ಷಕರಿಗೆ ಹರ್ಷ ಉಂಟು ಮಾಡಿದೆ.

ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯುವವರೆಗೆ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರುವುದು ಅನುಮಾನ ಆಗಿದೆ. ಲಾಕ್ ಡೌನ್ ವೇಳೆ ಬಿಡುಗಡೆ ಆದ ಚಿತ್ರಗಳು ಈಗ ಮತ್ತೆ ಚಿತ್ರ ಮಂದಿರದಲ್ಲಿ ಪ್ರದರ್ಶನ ಆಗುವ ಸಾಧ್ಯತೆ ಇದೆ.

ಯಶ್ ನಟನೆಯ ‘ಕೆಜಿಎಫ್ 2’, ಸುದೀಪ್ ನಟನೆಯ ‘ಕೋಟಿಗೊಬ್ಬ 3’, ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 3’, ದುನಿಯಾ ವಿಜಯ್‌ ನಟನೆಯ ‘ಸಲಗ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

ಚಿತ್ರ ಮಂದಿರ ತೆರೆದಿರುವ ಕಾರಣ ಹೊಸ ಚಿತ್ರಗಳು ಸೇರಿದಂತೆ ಸೆಟ್ ಏರಿದ ಚಿತ್ರಗಳ ಶೂಟಿಂಗ್ , ಪೋಸ್ಟ್ ಪ್ರೊಡಕ್ಷನ್ ಚಟುವಟಿಕೆ ಇನ್ನು ಮುಂದೆ ಸರಾಗವಾಗಿ ನಡೆಯಲು ಸಾಧ್ಯತೆ ಇದೆ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!