ನಟ ದರ್ಶನ್ ಅವರ ವಿರುದ್ಧ ಹಿರಿಯ ನಟ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ. ದರ್ಶನ್ ಅವರು ನಿರ್ದೇಶಕರಾದ ‘ಜೋಗಿ’ ಪ್ರೇಮ್ ಮತ್ತು ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧ ಪೋಸ್ಟ್ ಹಾಕಿದ್ದಾರೆ.
“ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡ ಮುಟ್ಟಿದೆ ಎಂದುಬಿಟ್ಟರೆ ಅದು ಆತ್ಮದ್ರೋಹ ಆಗಿಬಿಡುತ್ತದೆ. ನಮ್ಮನ್ನು ದಡ ಮುಟ್ಟಿಸಿದ್ದು ಅಂದಿನ ನಿರ್ದೇಶಕರು, ನಿರ್ಮಾಪಕರು, ಮಾಧ್ಯಮ, ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು ಎನ್ನುವುದನ್ನು ಮರೆಯಬಾರದು” ಎಂದು ಅವರು ಹೇಳಿದ್ದಾರೆ.
ನಿನ್ನೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದರ್ಶನ್, “ನಾನು ಯಾರಿಗೂ ಆನ್ಸರೇಬಲ್ ಅಲ್ಲ. ಅಭಿಮಾನಿಗಳಿಗೆ ಮಾತ್ರ ಉತ್ತರಿಸುತ್ತೇನೆ. ಜಗ್ಗೇಶ್ ಅವರಿಗೆ ನನ್ನ ಅಭಿಮಾನಿಗಳಿಂದಾದ ತೊಂದರೆಗೆ ಕ್ಷಮೆ ಕೇಳಿದೆ. ಸಾಕ್ಷಿ ಅಲ್ಲೂ ಇತ್ತು. ಜಗ್ಗೇಶ್ ಅವರು ಸೀನಿಯರ್ ಎಂದು ಕ್ಷಮೆ ಕೇಳಿದ್ದೆ” ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ದರ್ಶನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ದರ್ಶನ್ ಅವರ ಬಗ್ಗೆ ನಿರ್ಮಾಪಕರೊಬ್ಬರ ಬಳಿ ಜಗ್ಗೇಶ್ ಮಾತನಾಡಿದ್ದಕ್ಕೆ ಕೋಪಗೊಂಡ ದರ್ಶನ್ ಅಭಿಮಾನಿಗಳು ಚಿತ್ರೀಕರಣದಲ್ಲಿದ್ದ ಜಗ್ಗೇಶ್ ಅವರ ಮೇಲೆ ಮುತ್ತಿಗೆ ಹಾಕಿದ್ದರು. ಬಳಿಕ ದರ್ಶನ್ ಅಭಿಮಾನಿಗಳ ಪರವಾಗಿ ಜಗ್ಗೇಶ್ ಅವರ ಬಳಿ ಕ್ಷಮೆ ಕೇಳಿ ಪ್ರಕರಣಕ್ಕೆ ತೆರೆ ಎಳೆದಿದ್ದರು.
______

Be the first to comment