ಜೇಮ್ಸ್ ಚಿತ್ರದಲ್ಲಿ ಶೈನ್ ಶೆಟ್ಟಿ ಆಕ್ಟಿಂಗ್

ಬಿಗ್ ಬಾಸ್ ವಿನ್ನರ್, ನಟ ಶೈನ್ ಶೆಟ್ಟಿ ಪುನೀತ್ ರಾಜ್ ಕುಮಾರ್ ನಾಯಕತ್ವದ ‘ ಜೇಮ್ಸ್ ‘ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಜೇಮ್ಸ್ ಸಿನಿಮಾಕ್ಕೆ ಘಟೋತ್ಕಚ ಖ್ಯಾತಿಯ ನಟ ಕೇತನ್ ಕರಾಂಡೆ ಕೆಲ ದಿನಗಳ ಹಿಂದೆ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದರು. ಇದರ ಬೆನ್ನಲ್ಲೇ ಶೈನ್ ಶೆಟ್ಟಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

” ಜೇಮ್ಸ್ ಚಿತ್ರಕ್ಕೆ ಆಫರ್ ಬಂದಾಗ ತುಂಬಾ ಸಂತೋಷವಾಯಿತು. ಪವರ್ ಸ್ಟಾರ್ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ” ಎಂದು ಅವರು ಹೇಳಿದ್ದಾರೆ. “ಸುಮಾರು ಒಂದು ದಶಕದಿಂದ ಚಿತ್ರರಂಗದಲ್ಲಿದ್ದರೂ ಪವರ್ ಸ್ಟಾರ್ ಭೇಟಿಯಾಗಿಲ್ಲ. ಚಿತ್ರದ ಮೂಲಕ ಪುನೀತ್ ರಾಜಕುಮಾರ್ ಅವರ ಜೊತೆ ನಟನೆ ಮಾಡುತ್ತಿರುವುದಕ್ಕೆ ಖುಷಿ ಆಗಿದೆ” ಎಂದು ಅವರು ಹೇಳಿದ್ದಾರೆ.

ಶೈನ್ ಶೆಟ್ಟಿ ಅವರು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗಿಯಾಗಿ ವಿನ್ನರ್ ಆಗಿ ಹೊರಹೊಮ್ಮಿದ ಅವರು ಜೇಮ್ಸ್ ಚಿತ್ರದ ಮೂಲಕ ಹಿರಿ ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಜೇಮ್ಸ್ ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!