ದರ್ಶನ್ ಗೆ ನಿರ್ದೇಶಕ ಪ್ರೇಮ್ ತಿರುಗೇಟು

“ನಿರ್ದೇಶಕರು ಯಾವ ಪುಡಂಗಿಗಳು ಅಲ್ಲ. ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು. ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ” ಎಂದು ನಿರ್ದೇಶಕ ಪ್ರೇಮ್ ಅವರು ನಟ ದರ್ಶನ್ ಅವರಿಗೆ ತಿರುಗೇಟು ನೀಡಿದ್ದಾರೆ.

ಪ್ರೇಮ್ ಏನ್ ದೊಡ್ಡ ಪುಡುಂಗಾ, ಕೊಂಬೈತಾ ಎಂದು ದರ್ಶನ್ ಹೇಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ” ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲ. ನಂಗ್ ಕೊಂಬು ಇರ್ಲಿಲ್ಲ. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್, ಅಂಬರೀಷ್ , ವಿಷ್ಣುವರ್ಧನ್ ,ರಜನಿಕಾಂತ್ ಅವರು ನನ್ನನ್ನು ಒಬ್ಬ ಒಳ್ಳೆ ನಿರ್ದೇಶಕ ಅಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗ್ ಕೊಂಬು ಬರ್ಲಿಲ್ಲ. ನಾನು ನಂದೇ ಆದ್ ಸ್ಟೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು” ಎಂದು ಫೇಸ್ ಬುಕ್ ನಲ್ಲಿ ಹೇಳಿದ್ದಾರೆ.

“ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ. ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾ ಗೆ ಹಾರೈಸಿದವನು ನಾನು. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ. ಇದ್ರ ಮದ್ಯೆ ನನ್ ಹೆಸ್ರು ಯಾಕೆ.? ದರ್ಶನ್ ಅವರೇ ಯೋಚಿಸಿ ಮಾತನಾಡಿ” ಎಂದು ಪ್ರೇಮ್ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!