ಸಂಜನಾ ಸಿನಿ ಆರ್ಟ್ಸ್ ಲಾಂಛನದಲ್ಲಿ ಎಸ್.ಹೆಚ್ ವಾಳ್ಕೆ ಅವರು ನಿರ್ಮಿಸುತ್ತಿರುವ ‘ಲೋಕಲ್ ಟ್ರೈನ್ ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ ‘ಸೇರುವ ತನಕ ಉಪವಾಸ ಸೇರಿದ ಮೇಲೆ ಸಿಹಿ ಪಾಯಸ ದೂರದಲ್ಲಿದ್ರೆ ವನವಾಸ ಹತ್ತಿರ ಬಂದ್ರೆ ಮಧುಮಾಸ’ ಎಂಬ ಹಾಡಿನ ಚಿತ್ರೀಕರಣ ಮಿನರ್ವಮಿಲ್‍ನಲ್ಲಿ ಕಲಾ ನಿರ್ದೇಶಕ ಈಶ್ವರಿ ಕುಮಾರ್ ಅವರು ನಿರ್ಮಿಸಿದ್ದ ಸೆಟ್‍ವೊಂದರಲ್ಲಿ ನಡೆದಿದೆ.
ಕೃಷ್ಣ ಹಾಗೂ ಮೀನಾಕ್ಷಿ ದೀಕ್ಷಿತ್ ಅಭಿನಯಿಸಿದ ಈ ಹಾಡಿಗೆ ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ ರಾಜು ಸುಂದರಂ(ಮೂಗುರು ಸುಂದರಂ ಅವರ ಮಗ) ನೃತ್ಯ ನಿರ್ದೇಶನ ಮಾಡಿದ್ದಾರೆ. ನಾಲ್ಕು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆದಿದೆ. ಈ ವರೆಗೂ ಚಿತ್ರಕ್ಕೆ 65 ದಿನಗಳ ಚಿತ್ರೀಕರಣವಾಗಿದೆ.
ರುದ್ರಮುನಿ ವೈ.ಎನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಅನಂತ ಪದ್ಮನಾಭ ಸಹ ನಿರ್ದೇಶನ, ರಾಜು ಸುಂದರಂ, ಚಿನ್ನಿಪ್ರಕಾಶ್, ಗಬ್ಬರ್ ಸಿಂಗ್ ಗಣೇಶ್ ನೃತ್ಯ ನಿರ್ದೇಶನ, ಮಲ್ಲಿಕಾರ್ಜುನ ಮಾರಡಗಿ ನಿರ್ಮಾಣ ನಿರ್ವಹಣೆ ಹಾಗೂ ರಾಮ್ ಶೆಟ್ಟಿ, ಪಳನಿರಾಜ್, ಕುಮಾರ್ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣ, ಮೀನಾಕ್ಷಿ ದೀಕ್ಷಿತ್, ಎಸ್ತರ್ ನರೋನ, ಭಜರಂಗಿ ಲೋಕಿ, ಸಾಧುಕೋಕಿಲ, ಸುಚೀಂದ್ರ ಪ್ರಸಾದ್, ರೇಖಾ ಕುಮಾರ್, ಪೆಟ್ರೋಲ್ ಪ್ರಸನ್ನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Pingback: codeless website testing