ಬೆಂಗಳೂರು : ಫರ್ಹಾನ್ ಅಖ್ತರ್, ಮೃಣಾಲ್ ಠಾಕೂರ್ ಮತ್ತು ರಾಕೇಶ್ ಓ೦ಪ್ರಕಾಶ್ ಮೆಹ್ರಾ ನಿರ್ಮಿಸಿರುವ ತೂಫಾನ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗಲಿದೆ.
ಕ್ರೀಡೆ ಆಧಾರಿತ ಸ್ಪೂರ್ತಿದಾಯಕ ಚಿತ್ರವಾಗಿರುವ ತೂಫಾನ್‌ನ ಚಿತ್ರ ತಂಡವು ಸ್ಥಳೀಯ ಮಾಧ್ಯಮಗಳೊಂದಿಗೆ ವಿಶೇಷ ಸಂವಾದವನ್ನು ನಡೆಸಿ ತನ್ನ ಅನುಭವ ಹಂಚಿಕೊಂಡಿತು.
ಎಕ್ಸೆಲ್ ಎಂಟ್ಟೈನ್ಮೆಂಟ್ ಮತ್ತು ರಾಂಪ್ ಪಿಕ್ಚರ್ಸ್ ಸಹಯೋಗದೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋ ಪ್ರಸ್ತುತಪಡಿಸಿರುವ “ತೂಫಾನ್” ಚಿತ್ರಕ್ಕೆ ರಿತೇಶ್ ಸಿಧ್ವಾನಿ, ರಾಕೇಶ್ ಓ೦ಪ್ರಕಾಶ್ ಮೆಹ್ರಾ ಮತ್ತು ಫರ್ಹಾನ್ ಅಖ್ತರ್ ನಿರ್ಮಾಣ ಇದೆ. ರ‍್ಹಾನ್ ಅಖ್ತರ್, ಮೃನಾಲ್ ಠಾಕೂರ್, ಪರೇಶ್ ರಾವಲ್, ಸುಪ್ರಿಯಾ ಪಾಠಕ್ ಕಪೂರ್ ಮತ್ತು ಹುಸೇನ್ ದಲಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಕೇಶ್ ಓ೦ಪ್ರಕಾಶ್ ಮೆಹ್ರಾ ನಿರ್ದೇಶನ ಮಾಡಿದ್ದಾರೆ.
ನಟ ಮತ್ತು ಸಹ-ನಿರ್ಮಾಪಕ ಫರ್ಹಾನ್ ಅಖ್ತರ್ ಮಾತನಾಡಿ ” ಬೆಂಗಳೂರು ಕೇವಲ ಭಾರತದ ಐಟಿ ಅಥವಾ ಪಬ್ ನಗರ ಎನ್ನುವ ಹೆಸರಿಗೆ ಸೀಮಿತವಾಗಿಲ್ಲ, ಇತರ ಎಲ್ಲ ನಗರಗಳಂತೆ ಇದು ಉತ್ತಮ ಸಂಸ್ಕೃತಿ ಮತ್ತು ಸ್ಪೂರ್ತಿದಾಯಕ ಕಥೆಗಳ ನಗರವಾಗಿದೆ.
ಬೆಂಗಳೂರು ಪ್ರಖ್ಯಾತ ಕ್ರೀಡಾಪಟುಗಳ ನೆಲೆಯಾಗಿದೆ. ಒಬ್ಬ ನಿರ್ಮಾಪಕ ಮತ್ತು ನಟನಾಗಿ, ಬೆಂಗಳೂರಿನಲ್ಲಿ ಸ್ಥಳೀಯ ಮಾಧ್ಯಮಗಳೊಂದಿಗೆ ಸಂವಹನ ನಡೆಸಲು ನನಗೆ ಅವಕಾಶ ನೀಡಿದೆ. ಬೆಂಗಳೂರಿನ ವಾತಾವರಣ, ಹಾಗೂ ಇಲ್ಲಿ ಸಿಗುವ ಆಹಾರಗಳು, ಉದ್ಯಾನವನಗಳಲ್ಲಿ ಸುತ್ತಾಡದೆ ಇದ್ದರೆ ಬೆಂಗಳೂರು ಪ್ರವಾಸ ಪೂರ್ಣವಾಗುವುದಿಲ್ಲ” ಎಂದರು.
“ತೂಫಾನ್ ಚಿತ್ರದಿಂದ ನಾನು ಕಲಿತದ್ದು ಬಹಳ ಇದೆ.
ದೈಹಿಕವಾಗಿ ಎಷ್ಟೇ ಸದೃಢರಾಗಿದ್ದರೂ, ಬಾಕ್ಸರ್‌ನ ಸ್ಥಾನದಲ್ಲಿ ಹೆಜ್ಜೆ ಹಾಕುವುದು ಸಂಪೂರ್ಣ ಹೊಸ ಅನುಭವ ಆಗಿದೆ. ಪಾತ್ರಕ್ಕಾಗಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ತಯಾರಾಗಲು ನಾನು ದಿನಕ್ಕೆ 8 ರಿಂದ 9 ಗಂಟೆಗಳ ಕಾಲ ಕಠಿಣ ತರಬೇತಿಯನ್ನು ಪಡೆದಿದ್ದೆ. ಈ ಪಾತ್ರ ಮತ್ತು ಕಥೆಗಳು ನನ್ನ ಹೃದಯಕ್ಕೆ ಹತ್ತಿರವಾಗಿವೆ. ಪ್ರೇಕ್ಷಕರಿಗೂ ಸಹ ಅದೆ ರೀತಿ ಅನಿಸುತ್ತದೆ ಎಂದು ಭಾವಿಸಿದ್ದೇನೆ ” ಎಂದು ಚಿತ್ರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ನಿರ್ದೇಶಕ ರಾಕೇಶ್ ಓ೦ಪ್ರಕಾಶ್ ಮೆಹ್ರಾ,
“ಬೆಂಗಳೂರಿಗರು ಸಿನಿ ಪ್ರಿಯರಾಗಿದ್ದರೆ. ಜನರ ವಿನಮ್ರ ಮತ್ತು ಸಭ್ಯ ಸ್ವಭಾವವು ನನಗೆ ಸಂಪೂರ್ಣವಾಗಿ ಮೆಚ್ಚುಗೆಯಾಗಿದೆ. ಮಾಧ್ಯಮಗಳೊಂದಿಗೆ ಸಂವಹನ ನಡೆಸಿದ್ದು ತೃಪ್ತಿ ತಂದಿದೆ ” ಎಂದರು.
ನಟಿ ಮೃಣಾಲ್ ಠಾಕೂರ್, ಚಿತ್ರ ತಂಡದ ಸದಸ್ಯರು ಇದ್ದರು.
ಭಾರತದ ಪ್ರೈಮ್ ಸದಸ್ಯರು ಜುಲೈ 16 ರಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ತೂಫಾನ್ ಅನ್ನು ವೀಕ್ಷಣೆ ಮಾಡಬಹುದು.
_______________
Be the first to comment