“5ಡಿ” ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಚಿತ್ರರಂಗದಲ್ಲಿ ತಮ್ಮದೇ ಆದ ವಿಶೇಷವಾದಂಥ ಛಾಪನ್ನು ಮೂಡಿಸಿದ ನಿರ್ದೇಶಕ ಎಸ್. ನಾರಾಯಣ್. ಈಗ ಮತ್ತೊಂದು ವಿಭಿನ್ನ ಬಗೆಯ ವಿಶೇಷ ಚಿತ್ರದ ಫಸ್ಟ್ ಲುಕ್ ಅನಾವರಣ ಬೆಂಗಳೂರಿನ ಹೃದಯಭಾಗದ ಎಂ ಜಿ ರೋಡ್ ನಲ್ಲಿರುವ ಶಂಕರ್ ನಾಗ್ ಚಿತ್ರಮಂದಿರದಲ್ಲಿ ನೆರವೇರಿತು. ಈ ಚಿತ್ರವನ್ನು ಡೆಡ್ಲಿ ಆದಿತ್ಯ ಹಾಗೂ ಅದಿತಿ ಪ್ರಭುದೇವ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರದ ಫಸ್ಟ್ ಲುಕ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನಕಪುರದ ಬಂಡೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಗಮಿಸಿದ್ದು ವಿಶೇಷವಾಗಿತ್ತು. 5ಡಿ ಚಿತ್ರದ ಫಸ್ಟ್ ಲುಕ್ ವೀಕ್ಷಿಸಿ ನಂತರ ಡಿಕೆಶಿ ಮಾತನಾಡುತ್ತಾ ಚಿತ್ರರಂಗ ಉದ್ಯೋಗ ಸೃಷ್ಟಿಸುವ ಉದ್ಯಮ ಶೇಕಡ ಹನ್ನೊಂದರಷ್ಟು ಜನರಿಗೆ ಕೆಲಸ ಸಿಕ್ಕಿದೆ.

ಅದರಿಂದಲೇ ಇದನ್ನು ಉದ್ಯೋಗ ಸೃಷ್ಟಿಸುವ ಉದ್ಯಮ ಎನ್ನಬಹುದೆಂದು ಅಭಿಪ್ರಾಯಪಟ್ಟರು. ನಾನು ಸಹ ಮೂಲತ: ವಿತರಕನಾಗಿದ್ದೆ. ಕೆಲವು ಕಡೆಗಳಲ್ಲಿ ಚಿತ್ರಮಂದಿರಗಳನ್ನು ನಡೆಸುತ್ತಿದ್ದೆ. ನಿರ್ದೇಶಕ ಎಸ್. ವಿ.ರಾಜೇಂದ್ರಸಿಂಗ್ ಬಾಬು ಹಾಗೂ ನಾನು ಬಹಳ ವರ್ಷದ ಆತ್ಮೀಯರು ಹಾಗೂ ಎಸ್.ನಾರಾಯಣ್ ಸಲುವಾಗಿ ಶುಭ ಹಾರೈಸಲು ಬಂದಿದ್ದೇನೆ.

ಈ ಕೊರೋನಾ ಸಂದರ್ಭದಲ್ಲಿ ಬದುಕಿರುವವರೆ ಪುಣ್ಯವಂತರು. ಸರ್ಕಾರದಿಂದ ಚಿತ್ರರಂಗಕ್ಕೆ ಉಪಯೋಗವಾಗಿಲ್ಲ. ಇದರಿಂದ ಕಲಾವಿದರು, ಆರ್ಕೆಸ್ಟ್ರಾ, ಡ್ರಾಮಾ ಕಂಪೆನಿಗಳು ನಷ್ಟ ಅನುಭವಿಸುತ್ತಿದ್ದಾರೆಂದು ಸರ್ಕಾರವನ್ನು ಟೀಕಿಸಿದರು.ಹಾಗೆಯೇ ಇದು ಉತ್ತಮ ಚಿತ್ರವಾಗಿ ಹೊರ ಬರಲಿ ಎಂದು ಇಡೀ ತಂಡಕ್ಕೆ ಶುಭವನ್ನು ಹಾರೈಸಿದರು.

ಫಸ್ಟ್ ಲುಕ್ ಇಂದೇ ನೋಡಿದ್ದು, ಚೆನ್ನಾಗಿ ಬಂದಿದೆ. ನನ್ನ ವೃತ್ತಿಯಲ್ಲಿ ಒಳ್ಳೆ ಸಿನಿಮಾ. ಡಿಕೆಶಿ ಅವರ ನಗು ಸುಂದರ,ಅವರ ಅಭಿಮಾನಿಯಾಗಿ ಹೇಳುತ್ತಿರುವೆ. ಕಾಲೇಜಿನಲ್ಲಿದ್ದಾಗ ಶಂಕರ್‌ನಾಗ್ ಚಿತ್ರಮಂದಿರಕ್ಕೆ ಬರುತ್ತಿದೆ. ಇಂದು ನನ್ನದೆ ಸಿನಿಮಾದ ಸಮಾರಂಭ ನಡೆದಿರುವುದು ಖುಷಿ ಕೊಟ್ಟಿದೆ. ವಿಭಿನ್ನ ಕಾಸ್ಟ್ಯೂಮ್, ಮಾಸ್ಕ್ ಇರೋದ್ರರಿಂದ ಕುತೂಹಲ ಹುಟ್ಟಿಸಿದೆ. ನಿರ್ದೇಶಕರ ಅನಮತಿ ಇಲ್ಲದೆ ಮಾಹಿತಿ ನೀಡುವಂತಿಲ್ಲ. ಎಲ್ಲವನ್ನು ಚಿತ್ರದಲ್ಲಿ ನೋಡಿರೆಂದು ನಾಯಕ ಆದಿತ್ಯ ಕೋರಿಕೊಂಡರು.

ಮೊದಲ ಹಂತದ ಚಿತ್ರೀಕರಣ ಮುಗಿದೆ. ಲಾಕ್‌ಡೌನ್‌ದಿಂದ ಎರಡನೇ ಶೆಡ್ಯೂಲ್ ಶೂಟಿಂಗ್ ನಿಲ್ಲಿಸಲಾಗಿದ್ದು, ಸದ್ಯದಲ್ಲೆ ಶುರು ಮಾಡಲಾಗುವುದು. ಕಥಾನಾಯಕ ಪಾತ್ರದಲ್ಲಿ ಗುಂಡಿಗೆ ಇರುವ ಯುವಕ. ಅದಕ್ಕೆ ಕಲ್ಲುಬಂಡೆ ಡಿಕೆಶಿ ರವರನ್ನು ಕರೆಸಿದೆನೆoದ್ದು , ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನ ಮಾಡಿರುವ ಎಸ್.ನಾರಾಯಣ್ ತಿಳಿಸಿದರು.

ಭಾವಿ ಮುಖ್ಯ ಮಂತ್ರಿಗಳೆಂದು ಸಂಭೋದಿಸಿದ ಖ್ಯಾತ ವಕೀಲ ಶಂಕರಪ್ಪ ಮಾತನಾಡಿ ಮಕ್ಕಳ ಚಿತ್ರ ಮಾಡುವುದಾದರೆ ನಿರ್ಮಾಣ ಮಾಡಲು ಸಿದ್ದನಿದ್ದೇನೆ. ಸಣ್ಣದೊಂದು ಪಾತ್ರ ಮಾಡಿದ್ದೇನೆ. ನಾರಾಯಣ್ ಕುಟುಂಬದ ಕತೆಗಳನ್ನು ಹೆಚ್ಚು ನಿರ್ದೇಶಿಸಿದ್ದರು. ಕ್ರೈಂ ಸ್ಟೋರಿ ಮಾಡಿರುವುದು ಮೊದಲು ಅನಿಸುತ್ತದೆ ಎಂದರು.  ಲಾಕ್‌ಡೌನ್ ನಂತರ ಶೂಟಿಂಗ್‌ಗೆ ಹೋಗಿದ್ದು, ಕಾರ್ಯಕ್ರಮಕ್ಕೆ ಬಂದಿರುವುದು ಮೊದಲಾಗಿದೆ ಎಂದು ನಾಯಕಿ ಅದಿತಿಪ್ರಭುದೇವ ಸಂತಸ ಹಂಚಿಕೊಂಡರು.

ಇನ್ನೂ ಈ ಕಾರ್ಯಕ್ರಮಕ್ಕೆ ಚಿತ್ರೋದ್ಯಮದ ಆತ್ಮೀಯರು ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್ , ಸಂಗೀತ ನಿರ್ದೇಶಕ ಧರ್ಮವಿಶ್ , ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಸೇರಿದಂತೆ ಹಲವಾರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಒಂದು ವಿಭಿನ್ನ ಚಿತ್ರವು ಓನ್ ಟು ಅಂಡ್ರೆಡ್ ಸಂಸ್ಥೆ ಮುಖಾಂತರ ನಿರ್ಮಾಣ ಮಾಡಲಾಗುತ್ತಿದೆ. ಮಾದ್ಯಮದ ಸಹಕಾರಬೇಕೆಂದು ನಿರ್ಮಾಪಕ ಕುಮಾರ್ ಕೇಳಿಕೊಂಡರು. ಒಟ್ಟಾರೆ ವಿಭಿನ್ನ ಬಗೆಯ”5ಡಿ” ಚಿತ್ರದ ಫಸ್ಟ್ ಲುಕ್ ತೆರೆಯ ಮೇಲೆ ನೋಡಿದ್ದು ಬಹಳ ವಿಶೇಷವಾಗಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!