ಈ ಹಿಂದೆ “ಮಡಮಕ್ಕಿ”, “ನಂಜುಂಡಿ ಕಲ್ಯಾಣ ” ಮುಂತಾದ ಚಿತ್ರಗಳಲ್ಲಿ ನಟಿಸಿದ್ದ, ತನುಷ್ ಶಿವಣ್ಣ ನಾಯಕನಾಗಿ ನಟಿಸುತ್ತಿರುವ ಚಿತ್ರ “ನಟ್ವರ್ ಲಾಲ್”. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ವಿ.ಲವ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಮಾತಿನ ಜೋಡಣೆ ನಡೆಯುತ್ತಿದೆ.
ಕರ್ನಾಟಕದ ಸುಂದರ ಪರಿಸರಗಳಲ್ಲಿ ಚಿತ್ರೀಕರಣ ನಡೆದಿದೆ. ಹೆಚ್ಚಿನ ಚಿತ್ರೀಕರಣ ವಿವಿಧ ಸೆಟ್ ಗಳಲ್ಲಿ ನಡೆದಿರುವುದು ಈ ಚಿತ್ರದ ವಿಶೇಷ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ತನುಷ್ ಶಿವಣ್ಣ ನಟಿಸುತ್ತಿದ್ದು, ನಾಯಕಿಯಾಗಿ ಸೋನಾಲ್ ಮಾಂಟೆರೊ ಅಭಿನಯಿಸುತ್ತಿದ್ದಾರೆ.
ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ವಿಜಯ್ ಚೆಂಡೂರ್, ಕೆ.ಎಸ್.ಶ್ರೀಧರ್, ಯಶ್ ಶೆಟ್ಟಿ, ಗಿರಿ ಗೌಡ, ನಾಗಭೂಷಣ್, ಕಾಕ್ರೋಜ್ ಸುಧೀ, ಕಾಮಿಡಿ ಕಿಲಾಡಿಗಳು ನಯನ, ರಾಜೇಂದ್ರ ಕಾರಂತ್, ರಘು ರಮಣಕೊಪ್ಪ, ಸುಂದರರಾಜ್, ಕಾಂತರಾಜ್ ಕಡ್ಡಿಪಡಿ, ಬಲ ರಾಜವಾಡಿ, ಹರಿಣಿ, ಪದ್ಮಾ ವಾಸಂತಿ, ನಾಗರಾಜ್ ಅರಸು, ಭೀಷ್ಮ ರಾಮಯ್ಯ, ಪ್ರಶಾಂತ್ ಸಿದ್ದಿ ಮುಂತಾದವರ ಬಹುದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.
ಧರ್ಮ ವಿಶ್ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಪ್ರಶಾಂತ್ ಗೌಡ ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನ ” ನಟ್ವರ್ ಲಾಲ್” ಚಿತ್ರಕ್ಕಿದೆ.
https://youtu.be/GFnKzk5xtzY

Be the first to comment