ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಕಳೆದವಾರ ನಮ್ಮನ್ನು ಅಗಲಿದ್ದಾರೆ. ಪ್ರಯಾಣ ಮಾಡುವ ಸಂದರ್ಭದಲ್ಲಿ ಹೆಲ್ಮಟ್ ಹಾಕಿಕೊಂಡಿದ್ದರೆ, ಪ್ರಾಣ ಉಳಿಯುತ್ತಿತ್ತು ಎಂದು ಎಲ್ಲಾ ಕಡೆಯೂ ಸುದ್ದಿಯಾಗಿತ್ತು. ಈ ವಿಷಯವನ್ನು ಆಧರಿಸಿ, ಹಿರಿಯ ಪತ್ರಕರ್ತ,ನಟ,ನಿರ್ಮಾಪಕ ಯತಿರಾಜ್ ನಿರ್ದೇಶನ ಮಾಡುವ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಮೈಂಡ್ ಇಟ್’ ಹೆಸರಿನಲ್ಲಿ ಆರು ನಿಮಿಷದ ಹದಿನೈದನೆ ಕಿರುಚಿತ್ರವನ್ನು ತಮ್ಮದೆ ಸಂಸ್ಥೆ ’ಕಲಾವಿಧ ಫಿಲಂ ಅಕಾಡೆಮಿ’ ಮೂಲಕ ನಿರ್ಮಾಣ ಮಾಡಿದ್ದಾರೆ. ಯೂ ಟ್ಯೂಬ್‌ದಲ್ಲಿ ವೀಕ್ಷಿಸಿದವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಅದೊಂದು ಸುಂದರ ಸಂಸಾರ. ಗಂಡ ರಂಗಭೂಮಿ ಕಲಾವಿದ. ಅಡಿಷನ್‌ನಲ್ಲಿ ಇವರ ಅಭಿನಯ ಕಂಡು ನಿರ್ದೇಶಕ ಮತ್ತು ನಿರ್ಮಾಪಕರು ನಾಯಕನಾಗಿ ಚಿತ್ರಕ್ಕೆ ಆಯ್ಕೆ ಮಾಡುತ್ತಾರೆ. ಖುಷಿಯನ್ನು ಪತ್ನಿಯೊಂದಿಗೆ ಹಂಚಿಕೊಂಡು, ಮುಂಗಡ ಹಣ ಪಡೆಯಲು ಹೆಲ್ಮೆಟ್ ಧರಿಸದೆ ಹೋಗುತ್ತಾರೆ. ದಾರಿಯಲ್ಲಿ ಫೋನ್ ಬಂತೆಂದು ಮಾತಾಡುವಾಗ, ಹಳ್ಳದಿಂದ ಪಾರಾಗುವ ಸಲುವಾಗಿ, ಆಯ ತಪ್ಪಿ ಕೆಳೆಗೆ ಬೀಳುತ್ತಾರೆ.
ಫುಟ್‌ಬಾತ್‌ಗೆ ತಲೆ ತಗುಲಿ ರಕ್ತಸ್ರಾವಗೊಂಡು ಅಲ್ಲಿಯೇ ಪ್ರಾಣ ಕಳೆದುಕೊಳ್ಳುವುದರೊಂದಿಗೆ ಸಿನಿಮಾವು ಮುಗಿಯುತ್ತದೆ. ಪತ್ನಿಯಾಗಿ ನಯನ, ನಿರ್ಮಾಪಕರಾಗಿ ಬೆಂ.ಕೋ.ಶ್ರೀನಿವಾಸ್, ನಿರ್ದೇಶಕರಾಗಿ ಪರಮೇಶ್, ಬೇಬಿ ಸ್ಮ್ರತಿ ನಟಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನ ಸೋನುಸಾಗರ, ಸಂಗೀತ ವಿನುಮನಸು-ಮಾರುತಿಮೀರಜ್, ಹಿನ್ನಲೆ ಧ್ವನಿ ವಸಿಷ್ಟಸಿಂಹ ಅವರದು.





Be the first to comment