ಡಿಪರೆಂಟ್ ಪಾತ್ರದಲ್ಲಿ ಕಾವ್ಯ

ಕನ್ನಡಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಕರಂತೆ ನಾಯಕಿಯರೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಇದೀಗ ನಟಿ ಕಾವ್ಯ ಶೆಟ್ಟಿ ಕೂಡ ಎಂತಹುದೇ ಪಾತ್ರ ಮಾಡಲು ಸಿದ್ದ ಎನ್ನುವುದನ್ನು ನಿರೂಪಿಸಲು ಮುಂದಾಗಿದ್ಧಾರೆ.

ನಾಯಕಿಯಾಗಿ ಇದುವರೆ ಅನೇಕ ಚಿತ್ರಗಳಲ್ಲಿ ನಟಿಸಿ ಸಿಕ್ಕ ಅವಕಾಶಗಳಲ್ಲಿ ಸೈ ಎನಿಸಿಕೊಂಡಿರುವ ಕಾವ್ಯ ಶೆಟ್ಟಿ ಅವರು ಇದೀಗ ಲೂಸ್ಮಾದ ಯೋಗಿ ಅಭಿನಯದ ‘ಲಂಕೆ’ ರಾಮಾಯಣದ ಲಂಕೆಯಲ್ಲ. ಚಿತ್ರದಲ್ಲಿ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಂಡ್ಯ ಸುತ್ತ ಮುತ್ತ ಚಿತ್ರದ ಚಿತ್ರೀಕರಣ ಸಾಗಿದೆ. ಯೋಗಿ ನಾಯಕ, ಕೃಷಿತಾಪಂಡ ನಾಯಕಿ. ವಯಸ್ಸಿಗೂ ಮೀರಿದ ಮಹತ್ವದ ಪಾತ್ರದಲ್ಲಿ ಸಂಚಾರಿವಿಜಯ್ ನಟನೆ ಇದೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾವ್ಯಶೆಟ್ಟಿ ವಿಲನ್ ಶೇಡ್ನಲ್ಲಿ ಕಾಣಿಸಿಕೊಂಡು ಫೈಟ್ ಮಾಡಿರುವುದು ವಿಶೇಷ. ಅದು ಯಾವ ರೀತಿಯಲ್ಲಿ ಇರುತ್ತದೆಂಬುದನ್ನು ಗೌಪ್ಯವಾಗಿಡಲಾಗಿದೆ. ಹಲವು ಕಲಾವಿದರು ಇರುವ ಈ ಚಿತ್ರದಲ್ಲಿ ಎಸ್ತರ್ನರೋನ ಇದ್ದಾರೆ.

ಎಂ.ಡಿ.ರಾಮಪ್ರಸಾದ್ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಗೌಸ್ಪೀಸ್-ಅನಿರುದ್ದಶಾಸ್ತ್ರೀ ಸಾಹಿತ್ಯದ ಗೀತೆಗಳಿಗೆ ಕಾರ್ತಿಕ್ಶರ್ಮ ಸಂಗೀತ ಸಂಯೋಜಿಸಿದ್ದಾರೆ.  ರಮೇಶ್ ಬಾಬು  ಛಾಯಾಗ್ರಹಣ, ಶಿವರಾಜ್ಮೇಹು ಸಂಕಲನ, ಪಳನಿರಾಜ್-ರವಿವರ್ಮ-ಅಶೋಕ್ ಸಾಹಸ, ಧನಂಜಯ್-ಮೋಹನ್ ನೃತ್ಯವಿದೆ.

ದಿ ಗ್ರೇಟ್ ಎಂಟರ್ಟೈನರ್ಸ್ ಮುಖಾಂತರ ಪಟೇಲ್ಶ್ರೀನಿವಾಸ್ ಮತ್ತು ಸುರೇಖರಾಮ್ಪ್ರಸಾದ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರೀಕರಣದ ಹಂತದಲ್ಲಿ ತಂಡ ತೊಡಗಿಸಿಕೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!